ವಾಷಿಂಗ್ಟನ್: ‘ಬರ್ತ್ ಟೂರಿಸಂ’ ಹೆಸರಿನಲ್ಲಿ ಅಮೆರಿಕಕ್ಕೆ ಭೇಟಿ ನೀಡಲು ಬಯಸುವ ಗರ್ಭಿಣಿಯರಿಗೆ ವೀಸಾ ನೀಡುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿದ್ದಾರೆ. ಈ ಮೂಲಕ ವಲಸೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಹೋರಾಟ ಆರಂಭಿಸಿದ್ದಾರೆ.
ಗರ್ಭಿಣಿಯರಿಗೆ ವೀಸಾ ನಿರಾಕರಣೆ ಶುಕ್ರವಾರದಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಈ ಕುರಿತು ಹೇಳಿಕೆ ನೀಡಿರುವ ಶ್ವೇತ ಭವನ, ‘ಅಮೆರಿಕ ನೆಲದಲ್ಲಿ ಜನ್ಮನೀಡುವ ಮೂಲಕ ಮಕ್ಕಳಿಗೆ ಸ್ವಯಂ ಮತ್ತು ಶಾಶ್ವತವಾಗಿ ಅಮೆರಿಕದ ಪೌರತ್ವ ಪಡೆಯಲು ಒತ್ತು ನೀಡಿದ್ದರು‘ ಎಂದಿದೆ.
ಅಮೆರಿಕ ಪೌರತ್ವದ ಸಾರ್ವಭೌಮತ್ವವನ್ನು ನಾವು ರಕ್ಷಿಸಬೇಕಿದೆ ಎಂದು ಶ್ವೇತಭವನದ ವಕ್ತಾರ ಸ್ಟೀಫನ್ ಗ್ರಿಶಂಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.