ADVERTISEMENT

ಚೀನಾ ನಾಗರಿಕ ವಿಮಾನಗಳ ಸಂಚಾರ ರದ್ದು ಪಡಿಸಲಿದೆ ಅಮೆರಿಕ; ಜೂನ್‌ 16ರಿಂದ ಜಾರಿ

ಏಜೆನ್ಸೀಸ್
Published 3 ಜೂನ್ 2020, 16:45 IST
Last Updated 3 ಜೂನ್ 2020, 16:45 IST
ಚೀನಾದ ವಿಮಾನಯಾನ ಸಂಸ್ಥೆ
ಚೀನಾದ ವಿಮಾನಯಾನ ಸಂಸ್ಥೆ   

ವಾಷಿಂಗ್ಟನ್‌: ಅಮೆರಿಕದಿಂದ ತೆರಳುವ ಮತ್ತು ಅಮೆರಿಕಕ್ಕೆ ಬರುವ ಚೀನಾದ ನಾಲ್ಕು ವಿಮಾನಯಾನ ಸಂಸ್ಥೆಗಳ ವಿಮಾನ ಸಂಚಾರವನ್ನು ಜೂನ್‌ 16ರಿಂದ ರದ್ದುಗೊಳಿಸುವುದಾಗಿ ಅಮೆರಿಕ ಹೇಳಿದೆ.

ಅಮೆರಿಕದ ವಿಮಾನಗಳ ಸಂಚಾರಕ್ಕೆ ಚೀನಾ ಅನುಮತಿ ನೀಡದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕೊರೊನಾ ಸೋಂಕಿನ ಕಾರಣ ಜನವರಿಯಿಂದ ರದ್ದಾಗಿದ್ದ ವಿಮಾನಗಳ ಸಂಚಾರವನ್ನು ಈ ವಾರ ಆರಂಭಿಸಬೇಕೆಂದು ಅಮೆರಿಕ ಚೀನಾವನ್ನು ಕೋರಿತ್ತು.

ಅಮೆರಿಕದ ಯುನೈಟೆಡ್‌ ಏರ್‌ಲೈನ್ಸ್‌ ಮತ್ತು ಡೆಲ್ಟಾ ಏರ್‌ಲೈನ್ಸ್‌ ವಿಮಾನಗಳು ಚೀನಾಗೆ ಹಾರಾಟ ನಡೆಸಲು ಅನುಮತಿ ದೊರೆತಿಲ್ಲ.ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಮತ್ತು ಸಂಚಾರ ಬಿಕ್ಕಟ್ಟು ಮತ್ತಷ್ಟು ಹೆಚ್ಚಿದಂತಾಗಿದೆ

'ಚೀನಾ ಸರ್ಕಾರ ಅನುಮತಿ ನೀಡುವಷ್ಟೇ ನಾಗರಿಕ ವಿಮಾನಗಳ ಹಾರಾಟಕ್ಕೆ ನಾವೂ ಸಹ ಅವಕಾಶ ನೀಡುತ್ತೇವೆ' ಎಂದು ಅಮೆರಿಕ ಸಾರಿಗೆ ಇಲಾಖೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.