ಹೊವರ್ಡ್ ಲುಟ್ನಿಕ್
ನ್ಯೂಯಾರ್ಕ್: ‘ಭಾರತವು 140 ಕೋಟಿ ಜನರನ್ನು ಹೊಂದಿರುವು ದಾಗಿ ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ ಇಷ್ಟು ಜನಸಂಖ್ಯೆ ಹೊಂದಿರುವ ದೇಶ ಅಮೆರಿಕದಿಂದ ಒಂದು ಚೀಲ ಮುಸುಕಿನ ಜೋಳವನ್ನು ಏಕೆ ಖರೀದಿ ಮಾಡುವುದಿಲ್ಲ’ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್ ಲುಟ್ನಿಕ್ ಶನಿವಾರ ಪ್ರಶ್ನಿಸಿದ್ದಾರೆ.
‘ಎಲ್ಲವನ್ನೂ ನಮಗೆ ಮಾರುವ ಅವರು, ನಮ್ಮಿಂದ ಮುಸುಕಿನ ಜೋಳವನ್ನೂ ಖರೀದಿಸುವುದಿಲ್ಲ ಎಂದರೆ ತಪ್ಪಲ್ಲವೇ’ ಎಂದು ಅವರು ಕೇಳಿದರು.
‘ನವದೆಹಲಿ ನಮ್ಮ ಎಲ್ಲ ಸರಕುಗಳಿಗೂ ಸುಂಕ ವಿಧಿಸುತ್ತದೆ. ಆ ಸುಂಕಗಳನ್ನು ಕಡಿಮೆ ಮಾಡಬೇಕು. ನಾವು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆಯೋ ನೀವೂ ಹಾಗೆ ನಡೆಸಿಕೊಳ್ಳಿ. ಇಲ್ಲದಿದ್ದರೆ ಅಮೆರಿಕದ ಜತೆ ವ್ಯಾಪಾರ ಮಾಡಲು ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ. ಅದೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಯೂ ಆಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.