ನ್ಯೂಯಾರ್ಕ್ / ವಾಷಿಂಗ್ಟನ್: ವಲಸೆ ತಡೆಯಲು ಎಚ್1–ಬಿ ವಿಸಾದ ಶುಲ್ಕವನ್ನು 10 ಸಾವಿರ ಡಾಲರ್‌ಗೆ ಏರಿಸುವ ಘೋಷಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ. ಇದು ಭಾರತೀಯರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ದೇಶದ ಸದ್ಯದ ವಲಸೆ ವ್ಯವಸ್ಥೆಯಲ್ಲಿ ಎಚ್1–ಬಿ ಅತ್ಯಂತ ದುರುಪಯೋಗವಾದ ವಿಸಾ. ಅಮೆರಿಕನ್ನರು ಕೆಲಸ ಮಾಡದ ಕ್ಷೇತ್ರಗಳಲ್ಲಿ, ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕರಿಗೆ ಬರಲು ಅವಕಾಶ ನೀಡು ವಿಸಾ ಇದು. ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಶ್ವೇತ ಭವನದ ಕಾರ್ಯದರ್ಶಿ ವಿಲ್ ಶಾರ್ಫ್ ಹೇಳಿದ್ದಾರೆ
ಅಮೆರಿಕಕ್ಕೆ ಬರುವವರು ನಿಜಯವಾಗಿಯೂ ಕೌಶಲ್ಯ ಭರಿತರಾಗಿರಬೇಕು, ಅವರು ಅಮೆರಿಕನ್ ಕೆಲಸಗಾರರನ್ನು ಬದಲಿಸಬಾರದು ಎಂದು ಎಚ್1–ಬಿ ವಿಸಾದ ಶುಲ್ಕ ಏರಿಸಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.
ಇದು ಅಮೆರಿಕದ ಕೆಲಸಗಾರರನ್ನು ರಕ್ಷಿಸಲು ಹಾಗೂ ಕಂಪನಿಗಳಿಗೆ ಹೆಚ್ಚು ಕೌಶಲಭರಿತ ನೌಕರರನ್ನು ಅಮೆರಿಕಕ್ಕೆ ಕರೆತರಲು ಸಾಧ್ಯವಾಗಲಿದೆ. ಕಂಪನಿಗಳೇ ಈ ವಿಸಾದ ಶುಲ್ಕ ಪಾವತಿಸಲಿದೆ.
‘ನಮಗೆ ಕಾರ್ಮಿಕರು ಬೇಕು. ಉತ್ತಮ ಕೆಲಸಗಾರರು ಬೇಕು’ ಎಂದು ಓವಲ್ ಕಚೇರಿಯಲ್ಲಿ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರ ಸಮ್ಮುಖದಲ್ಲಿ ಘೋಷಣೆಗೆ ಸಹಿ ಹಾಕುತ್ತಾ ಟ್ರಂಪ್ ಹೇಳಿದ್ದಾರೆ.
ಆ ಮೊತ್ತವನ್ನು ತೆರಿಗೆ ಕಡಿತಗೊಳಿಸಲು ಮತ್ತು ಸಾಲವನ್ನು ಪಾವತಿಸಲು ಬಳಸಲಾಗುವುದು. ಇದು ತುಂಬಾ ಯಶಸ್ವಿಯಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ವಾರ್ಷಿಕವಾಗಿ 10,000 ಡಾಲರ್ ಶುಲ್ಕವನ್ನು ವಿಧಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.