ADVERTISEMENT

ಕಾಬೂಲ್ ವಿಮಾನ ನಿಲ್ದಾಣಕ್ಕೆ ಮತ್ತೆ ಉಗ್ರ ದಾಳಿ ಭೀತಿ: ಅಮೆರಿಕ ಎಚ್ಚರಿಕೆ ಸಂದೇಶ

ಏಜೆನ್ಸೀಸ್
Published 29 ಆಗಸ್ಟ್ 2021, 1:25 IST
Last Updated 29 ಆಗಸ್ಟ್ 2021, 1:25 IST
ಕಾಬೂಲ್ ವಿಮಾನ ನಿಲ್ದಾಣ – ರಾಯಿಟರ್ಸ್ ಸಂಗ್ರಹ ಚಿತ್ರ
ಕಾಬೂಲ್ ವಿಮಾನ ನಿಲ್ದಾಣ – ರಾಯಿಟರ್ಸ್ ಸಂಗ್ರಹ ಚಿತ್ರ   

ವಾಷಿಂಗ್ಟನ್: ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣಕ್ಕೆ ಮತ್ತೆ ದಾಳಿ ಭೀತಿ ಇದೆ. ಜನರು ಆ ಪ್ರದೇಶ ತೊರೆಯುವುದು ಒಳ್ಳೆಯದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಭಾರಿ ಆತ್ಮಾಹತ್ಯಾ ದಾಳಿ ನಡೆದ ಕೆಲವೇ ದಿನಗಳಲ್ಲಿ ಮತ್ತೆ ಈ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ದಾಳಿ ಭೀತಿ ಇರುವುದು ಖಚಿತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ವಿಮಾನ ನಿಲ್ದಾಣದ ಸುತ್ತ ಇರುವ ಅಮೆರಿಕ ನಾಗರಿಕರು ತಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಕಾಬೂಲ್‌ನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯೂ ಎಚ್ಚರಿಕೆ ನೀಡಿದೆ.

ಕಳೆದ ಗುರುವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 13 ಮಂದಿ ಅಮೆರಿಕದ ಸೈನಿಕರು ಸೇರಿದಂತೆ 78 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಅಫ್ಗಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಅಮೆರಿಕ ಸೇನೆಯು ಶನಿವಾರ ಬೆಳಿಗ್ಗೆ ಡ್ರೋನ್ ದಾಳಿ ನಡೆಸಿದ್ದು, ಇಬ್ಬರು ಐಸಿಸ್ ಉಗ್ರರು ಹತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.