ADVERTISEMENT

ಪ್ರತಿದಾಳಿಗೆ ಮುಂದಾದರೆ ಇರಾನ್‌ನ 52 ಸ್ಥಳಗಳ ಮೇಲೆ ದಾಳಿ: ಟ್ರಂಪ್‌ ಎಚ್ಚರಿಕೆ

ಪಿಟಿಐ
Published 5 ಜನವರಿ 2020, 3:20 IST
Last Updated 5 ಜನವರಿ 2020, 3:20 IST
   

ವಾಷಿಂಗ್ಟನ್​:ಇರಾನ್‌ ಸೇನೆಯ ಖಾಸಿಂ ಸುಲೇಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್‌ ಬೆದರಿಕೆ ಹಾಕಿರುವ ಬೆನ್ನಲ್ಲೇ ನಮ್ಮ ಮೇಲೆದಾಳಿ ಮಾಡಿದರೆ ಇರಾನ್​ನ 52 ಸ್ಥಳಗಳ ಮೇಲೆ ದೊಡ್ಡ ಪ್ರಮಾಣದಲ್ಲಿಪ್ರತಿ ದಾಳಿ ನಡೆಸಲಾಗುವುದುಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ.

ಪ್ರತಿದಾಳಿಗೆಸಂಚು ರೂಪಿಸುತ್ತಿರುವ ಇರಾನ್​ಗೆ ಸರಣಿ ಟ್ವೀಟ್‌ಗಳ ಮೂಲಕಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇರಾಕ್‌ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಸುಕಿನಲ್ಲಿ ಅಮೆರಿಕ ವಾಯುದಾಳಿ ನಡೆಸಿಇರಾನ್‌ನ ಸೇನೆಯ ‘ರೆವಲ್ಯೂಷನ್ ಗಾರ್ಡ್‌’ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿಯನ್ನು ಕೊಂದುಹಾಕಿತ್ತು. ಈ ಹತ್ಯೆಗೆಸೇಡು ತೀರಿಸಿಕೊಳ್ಳುವುದಾಗಿ ಇರಾನ್‌ ಬೆದರಿಕೆ ಹಾಕಿತ್ತು.

ADVERTISEMENT

ನಮ್ಮ ಮೇಲೆ ಪ್ರತಿದಾಳಿ ನಡೆದರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ಪ್ರಮುಖ ಸ್ಥಳಗಳನ್ನು ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿನಡೆಸಲಾಗುವುದು, ಇರಾನ್‌ ಸೇರಿ 52 ಸ್ಥಳಗಳ ಮೇಲೆ ನಿಗಾ ಇಡಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.