ಕಠ್ಮಂಡು: ಎರಡು ದಿನಗಳ ಭೇಟಿಗಾಗಿ ನೇಪಾಳಕ್ಕೆ ಆಗಮಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭಾನುವಾರ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರನ್ನು ಭೇಟಿಯಾದರು.
ಸಿಂಹದರ್ಬಾರ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಈ ಸಭೆ ನಡೆಯಿತು ಎಂದು ಪ್ರಧಾನಿ ಸಚಿವಾಲಯ ಹೇಳಿದೆ. ನೇಪಾಳದ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ಕೂಡ ಸಭೆಯಲ್ಲಿ ಇದ್ದರು.
ನೇಪಾಳದ ವಿದೇಶಾಂಗ ಕಾರ್ಯದರ್ಶಿ ಅಮೃತ ಬಹದ್ದೂರ್ ರಾಯ್ ಅವರ ಆಮಂತ್ರದ ಮೇರೆಗೆ ಆಗಮಿಸಿರುವ ಮಿಸ್ರಿ, ನಾಳೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಅದಕ್ಕೂ ಮೊದಲು ದೇಶದ ಅಧ್ಯಕ್ಷ ರಾಮಚಂದ್ರ ಪೌದೆಲ್ ಮತ್ತು ವಿದೇಶಾಂಗ ಸಚಿವ ಅರ್ಜು ರಾಣಾ ದೇವುವಾ ಅವರನ್ನು ಭೇಟಿಯಾಗಲಿದ್ದಾರೆ.
ಅಲ್ಲದೆ, ದೇಶದ ಪ್ರಮುಖ ಪಕ್ಷವಾದ ನೇಪಾಳಿ ಕಾಂಗ್ರೆಸ್‌ನ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ, ನೇಪಾಳ ಕಮ್ಯುನಿಸ್ಟ್ ಪಾರ್ಟಿ – ಮಾವೋವಾದಿ ಸೆಂಟರ್‌ನ ಮುಖ್ಯಸ್ಥ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಅವರನ್ನು ಕೂಡ ಭೇಟಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.