ADVERTISEMENT

ದಕ್ಷಿಣ ಆಫ್ರಿಕಾದ ಆರ್ಥಿಕತೆ ನಾಶ ಮಾಡುವ ಯತ್ನ: ಸಚಿವರ ಆರೋಪ

ಪಿಟಿಐ
Published 14 ಜುಲೈ 2021, 14:02 IST
Last Updated 14 ಜುಲೈ 2021, 14:02 IST
ದಕ್ಷಿಣ ಆಫ್ರಿಕಾದ ಡರ್ಬಾನ್‌ ನಗರದಲ್ಲಿರುವ ಉಗ್ರಾಣವೊಂದಕ್ಕೆ ಬುಧವಾರ ಬೆಂಕಿ ಹಚ್ಚಿದ ಗಲಭೆಕೋರರು, ವಿವಿಧ ವಸ್ತುಗಳನ್ನು  ಲೂಟಿ ಮಾಡಿದರು –ರಾಯಿಟರ್ಸ್‌ ಚಿತ್ರ
ದಕ್ಷಿಣ ಆಫ್ರಿಕಾದ ಡರ್ಬಾನ್‌ ನಗರದಲ್ಲಿರುವ ಉಗ್ರಾಣವೊಂದಕ್ಕೆ ಬುಧವಾರ ಬೆಂಕಿ ಹಚ್ಚಿದ ಗಲಭೆಕೋರರು, ವಿವಿಧ ವಸ್ತುಗಳನ್ನು  ಲೂಟಿ ಮಾಡಿದರು –ರಾಯಿಟರ್ಸ್‌ ಚಿತ್ರ   

ಜೋಹಾನ್ಸ್‌ಬರ್ಗ್‌: ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಅವರಿಗೆ ಜೈಲು ಶಿಕ್ಷೆಯಾಗಿರುವುದಕ್ಕೂ, ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೂ ಸಂಬಂಧವೇ ಇಲ್ಲ. ಇದು ದೇಶದ ಆರ್ಥಿಕತೆಯನ್ನು ನಾಶಗೊಳಿಸಲು ನಡೆಯುತ್ತಿರುವ ಸಂಘಟಿತ ಯತ್ನ ಎಂದು ದಕ್ಷಿಣ ಆಫ್ರಿಕಾದ ಇಬ್ಬರು ಸಚಿವರು ಹೇಳಿದ್ದಾರೆ.

‘ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವುದು. ಅಂಗಡಿಗಳನ್ನು ಲೂಟಿ ಹೊಡೆಯುವುದನ್ನು ನೋಡಿದರೆ, ದೇಶದ ಆರ್ಥಿಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಬುಡಮೇಲು ಮಾಡುವ ಹುನ್ನಾರದಂತೆ ಕಾಣುತ್ತದೆ’ ಎಂದು ರಕ್ಷಣಾ ಖಾತೆಯ ಡೆಪ್ಯುಟಿ ಸಚಿವ ಝಿಝಿ ಕೊಡ್ವಾ, ಖನಿಜ ಮತ್ತು ಇಂಧನ ಸಚಿವ ಗ್ವೆಡೆ ಮಂಟಾಶೆ ಹೇಳಿದ್ದಾರೆ.

‘ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಗಲಭೆ, ಲೂಟಿಯಂಥ ಕೃತ್ಯಗಳು ರಾಜಕೀಯ ಪ್ರೇರಿತ’ ಎಂದು ಕೊಡ್ವಾ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.