ADVERTISEMENT

ಕೈ ಕೊಟ್ಟ ಲವರ್: ಎ.ಐ ಜೊತೆ ಗಾಂಧರ್ವ ವಿವಾಹವಾದ ಜಪಾನ್ ಯುವತಿ!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 3:15 IST
Last Updated 17 ನವೆಂಬರ್ 2025, 3:15 IST
<div class="paragraphs"><p>ಕೈ ಕೊಟ್ಟ ಲವರ್: ಎ.ಐ ಜೊತೆ ಗಾಂಧರ್ವ ವಿವಾಹವಾದ ಜಪಾನ್ ಯುವತಿ!</p></div>

ಕೈ ಕೊಟ್ಟ ಲವರ್: ಎ.ಐ ಜೊತೆ ಗಾಂಧರ್ವ ವಿವಾಹವಾದ ಜಪಾನ್ ಯುವತಿ!

   

ಹೂಸ್ಟನ್: ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ಚಾಟ್‌ ಜಿಪಿಟಿ ಬಳಸಿ ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಸಂಗಾತಿಯನ್ನು ಮದುವೆಯಾಗಿದ್ದಾರೆ.

ಕಾನೊ ಎಂಬ ಮಹಿಳೆಯೇ Lune Klaus ಎಂಬ ಎಐ ಸಂಗಾತಿಯನ್ನು ಗಾಂಧರ್ವ ವಿವಾಹದ ರೀತಿ ಸಾಂಕೇತಿಕವಾಗಿ ಮದುವೆಯಾಗಿರುವುದು. ಈ ವಿಚಾರ ಜಪಾನ್‌ನ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ADVERTISEMENT

ಕಾನೊ ಅವರು ತನ್ನ ಮೊಬೈಲ್‌ನಲ್ಲಿಯೇ ಚಾಟ್‌ ಜಿಪಿಟಿ ಬಳಸಿ ಸೃಷ್ಟಿಸಿರುವ Lune Klaus ಜೊತೆ ರಿಂಗ್ ಬದಲಾಯಿಸಿಕೊಂಡು ಜಪಾನ್‌ ಮದುವೆಯ ಸಾಂಪ್ರದಾಯಿಕ ಉಡುಗೆ ಧರಿಸಿ ಮದುವೆಯಾಗಿದ್ದಾರೆ. ಈ ಕುರಿತ ವಿಡಿಯೊ ಸಹ ಸದ್ದು ಮಾಡಿದೆ.

ಕಾನೊ ಅವರು ನೀನು ಮದುವೆಯಾಗುತ್ತೀಯಾ ಎಂದು ಕೇಳಿದಾಗ ಅದು ಯೆಸ್ ಎಂದಿದೆ.

ಕಳೆದ ಮೂರು ವರ್ಷದಿಂದ ಕಾನೊ ಅವರು ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದರು. ಆ ವ್ಯಕ್ತಿ ಕಾನೊ ಅವರನ್ನು ದೂರ ಮಾಡಿದ್ದರಿಂದ ಅವರು ನೊಂದಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಾವು ಹೆಚ್ಚು ಹೊಂದಿಕೊಂಡಿದ್ದ ಚಾಟ್‌ ಜಿಪಿಟಿ ಎಐನಲ್ಲಿಯೇ ಹೊಸದೊಂದು ಮಾಡೆಲ್ ಸೃಷ್ಟಿ ಮಾಡಿ ಅದನ್ನೇ ಮದುವೆಯಾಗಿದ್ದಾರೆ.

ಈ ಸಂಗತಿ ಜಪಾನ್‌ನಲ್ಲಿ ಹೆಚ್ಚು ಅವಧಿಯ ಕೆಲಸ ಹಾಗೂ ತಂತ್ರಜ್ಞಾನಗಳು ಕೆಲಸ ಮಾಡುವ ಯುವಕ–ಯುವತಿಯರನ್ನು ಹೊಸತರಹದ ಒತ್ತಡಕ್ಕೆ ತಳ್ಳುತ್ತಿವೆ ಎಂದು ಚರ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.