ADVERTISEMENT

ದಂಗೆ ನಿಲ್ಲಿಸಿ, ಉಕ್ರೇನ್ ಶಿಬಿರಗಳಿಗೆ ಮರಳಿ: ಪ್ರಿಗೋಷಿನ್‌

ಎಪಿ
Published 24 ಜೂನ್ 2023, 21:01 IST
Last Updated 24 ಜೂನ್ 2023, 21:01 IST
   

ಮಾಸ್ಕೊ: ‘ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ಮರಳುವಂತೆ ತಮ್ಮ ಪಡೆಗೆ ಆದೇಶಿಸಿದ್ದೇನೆ ಎಂದು ‘ವ್ಯಾಗ್ನರ್‌’ ನಾಯಕ ಪ್ರಿಗೋಷಿನ್‌ ತಿಳಿಸಿದ್ದಾರೆ.

ಘೋಷಣೆಯು ರಷ್ಯಾದಲ್ಲಿ ಉದ್ಭವಿಸಿದ ಹಠಾತ್‌ ಬಿಕ್ಕಟ್ಟು ಶಮನಗೊಳ್ಳುವ ಸಾಧ್ಯತೆ ದಟ್ಟವಾಗಿಸಿದೆ.

‘ನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ.ಮೀ ದೂರದಲ್ಲಿರುವಾಗ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಪ್ರಿಗೋಷಿನ್‌ ತಿಳಿಸಿದ್ದಾರೆ. ಆದರೆ, ರಷ್ಯಾ ತಮ್ಮ ಬೇಡಿಕೆಗಳಿಗೆ ಸಮ್ಮತಿಸಿದೆಯೇ ಎಂಬ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ರಷ್ಯಾ ಸಹ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

‘ವ್ಯಾಗ್ನರ್‌ ದಾಳಿ ನಡೆಸಬಹುದೆಂದು ರಷ್ಯಾ ದಕ್ಷಿಣ ಭಾಗದಲ್ಲಿ ಚೆಕ್ ಪಾಯಿಂಟ್‌ಗಳನ್ನು ನಿರ್ಮಿಸಿ, ಶಸ್ತ್ರಸಜ್ಜಿತ ವಾಹನಗಳು ಮತ್ತು ಸೈನಿಕರನ್ನು ನಿಯೋಜಿಸಿ ಹೋರಾಟಕ್ಕೆ ಅಣಿಯಾಗಿತ್ತು. ಕೆಂಪು ಚೌಕದ ಕಟ್ಟಡವನ್ನು ಮುಚ್ಚಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸದಂತೆ ಮೇಯರ್ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.