ADVERTISEMENT

'ವಾಷಿಂಗ್ಟನ್ ಪೋಸ್ಟ್‌'ನಲ್ಲಿ ಭಾರಿ ಉದ್ಯೋಗ ಕಡಿತ: ಶಶಿ ತರೂರ್ ಪುತ್ರನಿಗೂ ಕೊಕ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2026, 4:43 IST
Last Updated 5 ಫೆಬ್ರುವರಿ 2026, 4:43 IST
   

ನವದೆಹಲಿ: ಜೆಫ್‌ ಬಿಜೋಸ್ ಒಡೆತನದ ಅಮೆರಿಕದ ಜನಪ್ರಿಯ ದಿನಪತ್ರಿಕೆ ‘ದಿ ವಾಷಿಂಗ್ಟನ್ ಪೋಸ್ಟ್’ ಬುಧವಾರ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರು ಪುತ್ರ ಇಶಾನ್‌ ತರೂರ್‌ ಅವರಲ್ಲಿ ಒಬ್ಬರಾಗಿದ್ದಾರೆ.

ಸುಮಾರು 12 ವರ್ಷದಿಂದ ಪತ್ರಿಕೆಯಲ್ಲಿ ಅಂಕಣಗಾರರಾಗಿ ಕೆಲಸ ಮಾಡುತ್ತಿರುವ ಇಶಾನ್‌ ಅವರು ಕೆಲಸದಿಂದ ವಜಾಗೊಂಡಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.

‘ದಿ ವಾಷಿಂಗ್ಟನ್ ಪೋಸ್ಟ್‌ನಿಂದ ಇಂದು ನನ್ನನ್ನು ವಜಾಗೊಳಿಸಲಾಗಿದೆ. ಜೊತೆಗೆ ಅಂತರರಾಷ್ಟ್ರೀಯ ಸಿಬ್ಬಂದಿ ಮತ್ತು ಇತರ ನನ್ನ ಸಹೋದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಸುಮಾರು 12 ವರ್ಷದಿಂದ ಪತ್ರಿಕೆಗಾಗಿ ಕೆಲಸ ಮಾಡಿದ ನನ್ನೆಲ್ಲಾ ಸಹೋದ್ಯೋಗಿಗಳನ್ನು ನೆನೆದು ಬೇಸರವಾಗಿದೆ. ಅವರೊಂದಿಗೆ ಕೆಲಸ ಮಾಡುವುದು ಒಂದು ಗೌರವವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಇದೇ ವೇಳೆ 2017ರಲ್ಲಿ ‘ವರ್ಲ್ಡ್ ವ್ಯೂ’ ಅಂಕಣವನ್ನು ಪ್ರಾರಂಭಿಸಿದ್ದನ್ನು ಇಶಾನ್‌ ನೆನಪಿಸಿಕೊಂಡಿದ್ದಾರೆ. ‘ನನ್ನ ಅಂಕಣವನ್ನು ಓದಿದ ನಿಷ್ಠಾವಂತ ಚಂದಾದಾರರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ನ್ಯೂಸ್‌ ರೂಮ್‌ ಫೋಟೊ ಹಂಚಿಕೊಂಡಿರುವ ಇಶಾನ್‌, ‘ಕೆಟ್ಟ ದಿನ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.