ವಿಶ್ವಸಂಸ್ಥೆ:ಭಾರತ–ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ಇರುವ ವಿವಾದಗಳ ಇತ್ಯರ್ಥಕ್ಕೆ ಪಾಕಿಸ್ತಾನ ಸಕಾರಾತ್ಮಕ ಆಲೋಚನೆ ಮತ್ತು ಸಕಾರಾತ್ಮಕ ಕಾರ್ಯ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ದೀರ್ಘಕಾಲದಿಂದ ತಿರಸ್ಕರಿಸಿದ ವೈಫಲ್ಯಗಳನ್ನು ಪುನರುಚ್ಚರಿಸುವುದು ನಿರ್ಧಿಷ್ಟ ಉದ್ದೇಶ ಅಥವಾ ಪ್ರತಿಫಲನವನ್ನು ಬಿಂಬಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹೊಸ ಸರ್ಕಾರದಿಂದ ರಚನಾತ್ಮಕ ಕೆಲಸ ನಿರೀಕ್ಷೆ
ಪಾಕಿಸ್ತಾನದ ಹೊಸ ಸರ್ಕಾರವುಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ, ದಕ್ಷಿಣ ಏಷ್ಯಾದಸುರಕ್ಷತೆ, ಸ್ಥಿರ ಹಾಗೂ ಅಭಿವೃದ್ಧಿ ಉದ್ದೇಶದಿಂದ ವಿವಾದಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಬದಲು, ರಚನಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ ಎಂದು ಎಎನ್‌ಐ ಟ್ವಿಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.