ADVERTISEMENT

ಕೋವಿಡ್ ಔಷಧಿಗಳ ಪಟ್ಟಿಯಿಂದ ’ರೆಮ್ಡೆಸಿವಿರ್‘ ಕೈಬಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ಏಜೆನ್ಸೀಸ್
Published 20 ನವೆಂಬರ್ 2020, 16:46 IST
Last Updated 20 ನವೆಂಬರ್ 2020, 16:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೇವಾ: ಕೋವಿಡ್‌ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಗಿಲ್ಯಾಡ್ಸ್‌ನ 'ರೆಮ್ಡೆಸಿವಿರ್' ಔಷಧಿ ಬಳಕೆಗೆ ಶಿಫಾರಸು ನಿಲ್ಲಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಅಭಿವೃದ್ಧಿಶೀಲ ರಾಷ್ಟ್ರಗಳು ಸಂಗ್ರಹಣೆಗೆ ಮಾನದಂಡವಾಗಿ ಬಳಸಲಾಗುವ ಔಷಧಿಗಳ ಅಧಿಕೃತ ಪಟ್ಟಿಯಿಂದ ಗಿಲ್ಯಾಡ್ಸ್‌ನ ರೆಮ್ಡೆಸಿವಿರ್ ಅನ್ನು ತೆಗೆದು ಹಾಕಿರುವುದಾಗಿ ಶುಕ್ರವಾರ ತಿಳಿಸಿದೆ.

'ಹೌದು ನಾವು ಅದನ್ನು ಪ್ರಿಕ್ಯೂನಿಂದ (ಪೂರ್ವಭಾವಿ ಪಟ್ಟಿ) ಅಮಾನತುಗೊಳಿಸಿದ್ದೇವೆ' ಎಂದು ತಾರಿಕ್ ಜಸರೆವಿಕ್ ರಾಯಿಟರ್ಸ್‌ಗೆ ಇಮೇಲ್ ಮಾಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಚಿಕಿತ್ಸೆಯ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಕೋವಿಡ್‌ಗಾಗಿ ಔಷಧಿಯನ್ನು ಸಂಗ್ರಹಿಸಲು ದೇಶಗಳಿಗೆ ಶಿಫಾರಸು ಮಾಡುವುದಿಲ್ಲ ಎಂಬುದು ಈ ಅಮಾನತಿನ ಸಂಕೇತವಾಗಿದೆ ಎಂದಿದ್ದಾರೆ.

ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ ಯಾವ ಅಂತರರಾಷ್ಟ್ರೀಯ ಸಂಗ್ರಹಗಾರರು ಔಷಧಿಯನ್ನು ನೀಡುತ್ತಿದ್ದಾರೆ ಎಂಬುದು ಡಬ್ಲ್ಯುಎಚ್‌ಒಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಕೋವಿಡ್‌ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಗಿಲ್ಯಾಡ್ಸ್‌ನ ರೆಮ್ಡೆಸಿವಿರ್ ಔಷಧಿ ನೀಡಲು ಶಿಫಾರಸು ಮಾಡುವುದಿಲ್ಲ. ರೆಮ್ಡೆಸಿವಿರ್ ನೀಡುವಿಕೆಯಿಂದ ಸೋಂಕಿತರು ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ ಹಾಗೂ ವೆಂಟಿಲೇಟರ್‌ ಅಗತ್ಯವನ್ನು ಅದು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಡಬ್ಲ್ಯುಎಚ್‌ಒ ತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಕೋವಿಡ್‌ಗೆ ಚಿಕಿತ್ಸೆ ನೀಡುವಲ್ಲಿ ರೆಮ್ಡೆಸಿವಿರ್ ಪರಿಣಾಮಕಾರಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಅದರಿಂದಾಗಿ ಈ ಔಷಧಿ ವಿಶ್ವದ ಗಮನ ಸೆಳೆದಿತ್ತು. ಈಗ ಡಬ್ಲ್ಯುಎಚ್‌ಒ ತಂಡ ನೀಡಿರುವ ಹೇಳಿಕೆಯಿಂದಾಗಿ ಗಿಲ್ಯಾಡ್ಸ್‌ಗೆ ಹಿನ್ನಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.