ADVERTISEMENT

ಕೊರೊನಾ ವೈರಸ್ ಉಗಮದ ತನಿಖೆ: ವುಹಾನ್ ಆಸ್ಪತ್ರೆಗೆ ಡಬ್ಲ್ಯುಎಚ್‌ಒ ತಜ್ಞರ ತಂಡ

ಏಜೆನ್ಸೀಸ್
Published 30 ಜನವರಿ 2021, 4:49 IST
Last Updated 30 ಜನವರಿ 2021, 4:49 IST
ವುಹಾನ್‌ಗೆ ಆಗಮಿಸಿರುವ ಡಬ್ಲ್ಯುಎಚ್‌ಒ ತಜ್ಞರ ತಂಡ (ಎಎಫ್‌ಪಿ)
ವುಹಾನ್‌ಗೆ ಆಗಮಿಸಿರುವ ಡಬ್ಲ್ಯುಎಚ್‌ಒ ತಜ್ಞರ ತಂಡ (ಎಎಫ್‌ಪಿ)   

ವುಹಾನ್‌: ಕೊರೊನಾ ವೈರಸ್‌ನ ಮೂಲ ಪತ್ತೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವಿಜ್ಞಾನಿಗಳನ್ನೊಳಗೊಂಡ ತಂಡ ಚೀನಾದ ವುಹಾನ್‌ನ ನಗರದ ಎರಡನೇ ಆಸ್ಪತ್ರೆಗೆ ಭೇಟಿ ನೀಡಿದೆ.

2020ರ ಆರಂಭದಲ್ಲಿ ನಗರದ ಜಿನಿಯಾಂಟನ್‌ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರೋಗಿಯೊಬ್ಬರಲ್ಲಿ ವೈರಸ್‌ ಪತ್ತೆಯಾಗಿತ್ತು. ಇದು ತನಿಖೆಯ ಪ್ರಮುಖ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಬ್ಲ್ಯುಎಚ್‌ಒ ತಂಡ ಶುಕ್ರವಾರ ಮೊದಲ ಬಾರಿಗೆ ಚೀನಾದ ವಿಜ್ಞಾನಿಗಳೊಂದಿಗೆ ಮುಖಾಮುಖಿ ಸಭೆ ನಡೆಸಿದೆ. ಬಳಿಕ ಪ್ರಾಣಿಗಳ ಆರೋಗ್ಯ, ವೈರಾಲಜಿ, ಆಹಾರ ಸುರಕ್ಷತೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರು ಹುಬೈ ಇಂಟಿಗ್ರೇಟೆಡ್ ಚೈನೀಸ್‌ ಮತ್ತು ವೆಸ್ಟರ್ನ್‌ ಮೆಡಿಸಿನ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು.

ADVERTISEMENT

ತನ್ನ ವಿಜ್ಞಾನಿಗಳ ತಂಡ ಮುಂದುವರಿದ ತನಿಖೆಯ ಭಾಗವಾಗಿ ಸೀಫುಡ್ ಮಾರ್ಕೆಟ್‌, ವುಹಾನ್‌ ಇನ್‌ಸ್ಟಿಟ್ಯೂಟ್‌.ಆಫ್‌ ವೈರಾಲಜಿ ಮತ್ತು ವುಹಾನ್‌ ಸೆಂಟರ್‌ ಫಾರ್‌ ಡಿಸೀಸ್ ಪ್ರಯೋಗಾಲಯಗಳಿಗೆ ಭೇಟಿ ನೀಡಲು ನಿರ್ಧರಿಸಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.