ADVERTISEMENT

'ಆಸ್ಕರ್': ಕಪಾಳ ಮೋಕ್ಷ ಘಟನೆ ವಿರುದ್ಧ ಕ್ರಮದ ಭರವಸೆ

ಪಿಟಿಐ
Published 30 ಮಾರ್ಚ್ 2022, 11:23 IST
Last Updated 30 ಮಾರ್ಚ್ 2022, 11:23 IST
ಆಸ್ಕರ್ ಪುರಸ್ಕಾರ ಸಮಾರಂಭದ ವೇಳೆ ವೇದಿಕೆ ಮೇಲೆಯೇ ಹಾಸ್ಯ ಕಲಾವಿದ ಕ್ರಿಸ್ ರಾಕ್ ಅವರಿಗೆ ಹಾಲಿವುಡ್ ಟನ ವಿಲ್ ಸ್ಮಿತ್ ಕಪಾಳಕ್ಕೆ ಹೊಡೆದರು
ಆಸ್ಕರ್ ಪುರಸ್ಕಾರ ಸಮಾರಂಭದ ವೇಳೆ ವೇದಿಕೆ ಮೇಲೆಯೇ ಹಾಸ್ಯ ಕಲಾವಿದ ಕ್ರಿಸ್ ರಾಕ್ ಅವರಿಗೆ ಹಾಲಿವುಡ್ ಟನ ವಿಲ್ ಸ್ಮಿತ್ ಕಪಾಳಕ್ಕೆ ಹೊಡೆದರು   

ಲಾಸ್ ಏಂಜಲೀಸ್: 2022ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ನಟ ಹಾಗೂ ಹಾಸ್ಯ ಕಲಾವಿದ ಕ್ರಿಸ್ ರಾಕ್ ಅವರಿಗೆ ಕಪಾಳ ಮೋಕ್ಷ ಮಾಡಿದ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ಅವರ ನಡವಳಿಕೆ ಖಂಡನೀಯ. ಘಟನೆ ಬಗ್ಗೆ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದು'ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್(ಎಎಂಪಿಎಎಸ್)' ಹೇಳಿದೆ.

ಈ ಸಂಬಂಧ ಅಕಾಡೆಮಿ ಸದಸ್ಯರಿಗೆ ಪತ್ರ ರವಾನಿಸಿರುವ ಎಎಂಪಿಎಎಸ್ ಅಧ್ಯಕ್ಷ ಹಾಗೂ ಸಿಇಒ ಡೇವಿಡ್ ರುಬಿನ್ ಅವರು, ' ಘಟನೆ ಬಗ್ಗೆ ಕ್ರಮ ಜರುಗಿಸಲಾಗುವುದು. ಈ ಕುರಿತ ಪ್ರಕ್ರಿಯೆ ಶೀಘ್ರವೇ ಆರಂಭವಾಗುವುದು' ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.