ADVERTISEMENT

ಬ್ರಿಟನ್ ರಾಜಕುಮಾರನ ಕಾಮತೃಷೆಗೆ ಬಳಕೆಯಾಗಿದ್ದೆ ಎಂದಿದ್ದ ಮಹಿಳೆ ಆತ್ಮಹತ್ಯೆ!

ಕಳೆದ ವಾರ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಸ್ ಅಪಘಾತದಲ್ಲಿ ವರ್ಜಿನಿಯಾ ಅವರು ಗಾಯಗೊಂಡಿದ್ದರು. ಇದು ಬಸ್ ಅಪಘಾತವೊ? ಕೊಲೆ ಯತ್ನವೊ? ಎಂದು ವರ್ಜಿನಿಯಾ ಶಂಕಿಸಿದ್ದರು.

ಏಜೆನ್ಸೀಸ್
Published 26 ಏಪ್ರಿಲ್ 2025, 6:46 IST
Last Updated 26 ಏಪ್ರಿಲ್ 2025, 6:46 IST
<div class="paragraphs"><p>ಬ್ರಿಟನ್ ರಾಜಕುಮಾರ ಪ್ರಿನ್ಸ್ ಆ್ಯಂಡ್ರೂ, ವೈರಲ್ ಆಗಿದ್ದ ಫೋಟೊ,&nbsp;ವರ್ಜಿನಿಯಾ ಗಿಫ್ರಿ</p></div>

ಬ್ರಿಟನ್ ರಾಜಕುಮಾರ ಪ್ರಿನ್ಸ್ ಆ್ಯಂಡ್ರೂ, ವೈರಲ್ ಆಗಿದ್ದ ಫೋಟೊ, ವರ್ಜಿನಿಯಾ ಗಿಫ್ರಿ

   

ಮೇಲ್ಬೊರ್ನ್: ತಮ್ಮ ಲೈಂಗಿಕ ತೃಷೆಗಾಗಿ ಬ್ರಿಟನ್ ರಾಜಕುಮಾರ ಪ್ರಿನ್ಸ್ ಆ್ಯಂಡ್ರೂ ಅವರು ನಾನು ಬಾಲಕಿಯಾಗಿದ್ದಾಗಲೇ ನನ್ನನ್ನು ಬಳಸಿಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದ ಅಮೆರಿಕ ಮೂಲದ ಮಹಿಳೆ ವರ್ಜಿನಿಯಾ ಗಿಫ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಪಶ್ಚಿಮ ಆಸ್ಟ್ರೇಲಿಯಾದ ನೀರ್‌ಗಬ್ಬಿ ಎಂಬ ಪ್ರದೇಶದ ತಮ್ಮ ಮನೆಯಲ್ಲಿ ಶುಕ್ರವಾರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರ್ಜಿನಿಯಾ ಗಿಫ್ರಿ ಅವರ ಸ್ನೇಹಿತೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ವರ್ಜಿನಿಯಾ ಗಿಫ್ರಿ ಅವರಿಗೆ 41 ವರ್ಷ ವಯಸ್ಸಾಗಿತ್ತು. ವರ್ಜಿನಿಯಾ ತಮಾಷೆಯ ಹಾಗೂ ಬುದ್ದಿವಂತೆ ಮಹಿಳೆಯಾಗಿದ್ದಳು. ಆದರೆ, ಬಲಿಪಶು ಮಾಡುವವರ ಕೈಗೆ ಅವಳು ಸಿಕ್ಕಿ ನರಳಿದ್ದಳು ಎಂದು ಅವರ ಸ್ನೇಹಿತೆ ದಿನಿ ವೋನ್ ಹೇಳಿದ್ದಾರೆ.

ಕಳೆದ ವಾರ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಸ್ ಅಪಘಾತದಲ್ಲಿ ವರ್ಜಿನಿಯಾ ಅವರು ಗಾಯಗೊಂಡಿದ್ದರು. ಇದು ಬಸ್ ಅಪಘಾತವೊ? ಕೊಲೆ ಯತ್ನವೊ? ಎಂದು ವರ್ಜಿನಿಯಾ ಶಂಕಿಸಿದ್ದರು.

ಅದಾದ ನಂತರ ಅವರು ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಹಲವು ದುಷ್ಟ ಶಕ್ತಿಗಳು ನನ್ನನ್ನು ಮುಗಿಸಲು ನೋಡುತ್ತಿವೆ ಎಂದು ಆತ್ಮಹತ್ಯೆಗೂ ಮುನ್ನ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

2000–02 ರ ಸಂದರ್ಭದಲ್ಲಿ ನ್ಯೂಯಾರ್ಕ್ ಹಾಗೂ ಲಂಡನ್‌ನಲ್ಲಿ ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ಆ್ಯಂಡ್ರೂ ನನ್ನನ್ನು ಬಳಸಿಕೊಂಡಿದ್ದರು. ಅದಕ್ಕಾಗಿ ಅವರು ಅಮೆರಿಕದ ಮಕ್ಕಳ ಕಳ್ಳಸಾಗಣೆದಾರ ಜೆಫ್ರಿ ಇಫ್‌ಸ್ಟಿನ್ ಸಹಾಯ ಪಡೆದಿದ್ದರು. ಆ್ಯಂಡ್ರೂ ಅವರು ಮೂರು ಬಾರಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದರು ಎಂದು ವರ್ಜಿನಿಯಾ 2015 ರಲ್ಲಿ ಬಿಬಿಸಿ ಸಂದರ್ಶನದಲ್ಲಿ ಹೇಳಿದ್ದರು. ಸಂದರ್ಶನಕ್ಕೆ ಕಾರಣ ವರ್ಜಿನಿಯಾ ಹಾಗೂ ಆ್ಯಂಡ್ರೂ ಜೊತೆಗಿದ್ದಿದ್ದ ಫೋಟೊ ಆಗ ವೈರಲ್ ಆಗಿತ್ತು.

ಅದಾದ ನಂತರ ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಈ ವಿಷಯ ತಲ್ಲಣ ಸೃಷ್ಟಿಸಿತ್ತು. ವರ್ಜಿನಿಯಾ ಅವರು ಆ್ಯಂಡ್ರೂ ಹಾಗೂ ಜೆಫ್ರಿ ಇಫ್‌ಸ್ಟಿನ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಆ್ಯಂಡ್ರೂ ಸ್ನೇಹಿತರು ಹಾಗೂ ಬಕಿಂಗ್‌ಹ್ಯಾಮ್ ಅರಮನೆ ವಕ್ತಾರರು ಪ್ರಿನ್ಸ್ ಆ್ಯಂಡ್ರೂ ಅವರದ್ದು ಯಾವುದೇ ತಪ್ಪಿಲ್ಲ. ತಿರುಚಲಾದ ಫೋಟೊ ಬಳಸಿ ಮಾನಹಾನಿ ಮಾಡಿದ್ದಾರೆ ಎಂದು ಆಗ ಹೇಳಿತ್ತು.

2022 ರಲ್ಲಿ ಅಮೆರಿಕದ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಆ್ಯಂಡ್ರೂ ಅವರು ವರ್ಜಿನಿಯಾ ಅವರಿಗೆ ಬಹಿರಂಗ‍ಪಡಿಸಲಾರದ ಮೊತ್ತವನ್ನು ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಕಾಕತಾಳೀಯ ಎಂಬಂತೆ ಜೆಫ್ರಿ ಇಫ್‌ಸ್ಟಿನ್ ಸಹ 2022 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬ್ರಿಟನ್ ರಾಜಮನೆತನದಲ್ಲಿ ದೀರ್ಘಾವಧಿಯವರೆಗೆ ರಾಣಿಯಾಗಿದ್ದ ಎರಡನೇ ಎಲಿಜೆಬೆತ್ ಅವರ ಎರಡನೇ ಮಗನೇ ಆ್ಯಂಡ್ರೂ. ಅವರನ್ನು ಬ್ರಿಟನ್ ರಾಜಮನೆತನದ ಡ್ಯುಕ್ ಆಫ್ ಯಾರ್ಕ್ ಎಂದು ಕರೆಯಲಾಗುತ್ತದೆ. ಸದ್ಯ ಆ್ಯಂಡ್ರೂ ಅವರ ಅಣ್ಣ ಮೂರನೇ ಚಾರ್ಲ್ಸ್ ಅವರು ಬ್ರಿಟನ್ ರಾಜನಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.