ADVERTISEMENT

Covid-19 World Update: 1.47 ಕೋಟಿ ಸೋಂಕಿತರು, ಆಕ್ಸ್‌ಫರ್ಡ್‌ ಲಸಿಕೆ ಸುರಕ್ಷಿತ

ಏಜೆನ್ಸೀಸ್
Published 21 ಜುಲೈ 2020, 5:47 IST
Last Updated 21 ಜುಲೈ 2020, 5:47 IST
   

ವಾಷಿಂಗ್ಟನ್‌: ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 1.47 ಕೋಟಿ ಸನಿಹಕ್ಕೆ ಬಂದಿರುವ ಬೆನ್ನಲ್ಲೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ತಯಾರಿಸುತ್ತಿರುವ ಲಸಿಕೆಯು, ಸುರಕ್ಷಿತ ಮತ್ತು ಪ್ರತಿರೋಧ ಶಕ್ತಿ ಉದ್ದೀಪಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿರುವುದು ಆತಂಕದ ಕಾರ್ಮೋಡ ಸರಿದಂತಾಗಿದೆ.

ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ವರದಿ ಪ್ರಕಾರಸದ್ಯ ಜಗತ್ತಿನಲ್ಲಿ 1,47,3,293 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6,06,987 ಮಂದಿ ಸಾವಿಗೀಡಾಗಿದ್ದಾರೆ.ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದೆ. ಅಲ್ಲಿ 38,30,010, ಬ್ರೆಜಿಲ್‌ನಲ್ಲಿ 21,18,646 , ಭಾರತದಲ್ಲಿ 11,55,338 ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್‌ ಎರನೇ ಸ್ಥಾನ, ಭಾರತ ಮೂರನೇ ಸ್ಥಾನದಲ್ಲೂ ಮುಂದುವರಿದಿವೆ.

ರಷ್ಯಾದಲ್ಲಿ 7,76,212 ಸೋಂಕಿತರಿದ್ದಾರೆ . ದಕ್ಷಿಣ ಆಫ್ರಿಕಾ ಕೊರೊನಾ ವೈರಸ್‌ನ ಹೊಸ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದು. ಅಲ್ಲಿ 3,73,628 ಪ್ರಕರಣಗಳು ವರದಿಯಾಗಿವೆ.

ADVERTISEMENT

ಕೊರೊನಾ ವೈರಸ್‌ಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ತಯಾರಿಸುತ್ತಿರುವ ಲಸಿಕೆಯು, ಸುರಕ್ಷಿತ ಮತ್ತು ಪ್ರತಿರೋಧ ಶಕ್ತಿ ಉದ್ದೀಪಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತದಲ್ಲಿ ಕೊವಾಕ್ಸಿನ್‌ ಲಸಿಕೆಯ ಮನುಷ್ಯರ ಮೇಲಿನ ಪ್ರಾಯೋಗಿಕ ಪರೀಕ್ಷೆ ಗುರುವಾರದಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.