ADVERTISEMENT

World covid-19 update: 66 ಲಕ್ಷ ಜನರಿಗೆ ಸೋಂಕು, 28.5 ಲಕ್ಷ ಸೋಂಕಿತರು ಗುಣಮುಖ

ಏಜೆನ್ಸೀಸ್
Published 5 ಜೂನ್ 2020, 2:29 IST
Last Updated 5 ಜೂನ್ 2020, 2:29 IST
   

ನ್ಯೂಯಾರ್ಕ್‌: ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಕೋವಿಡ್–19 ಸೋಂಕು 66 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದ್ದು, ಅದರಲ್ಲಿ 28.5 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿವಿಯ ಕೊರೊನಾ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ. ಸಾವಿನ ಸಂಖ್ಯೆ 3.89 ಲಕ್ಷದ ಗಡಿ ದಾಟಿದೆ.

ಅತಿಹೆಚ್ಚು (1,872,557) ಸೋಂಕು ಪ್ರಕರಣಗಳು ವರದಿಯಾಗಿರುವಅಮೆರಿಕ ಒಂದರಲ್ಲೇ 1,08,208 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 4,85,002 ಮಂದಿ ಗುಣಮುಖರಾಗಿದ್ದಾರೆ. ಅಮೆರಿಕ ನಂತರ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ರಾಷ್ಟ್ರಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 5,84,016 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಲ್ಲಿ 2,38,617 ಮಂದಿ ಗುಣಮುಖರಾಗಿದ್ದು, 35,548 ಸೋಂಕಿತರು ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 4,40,538 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 2,04,197 ಸೋಂಕಿತರು ಗುಣಮುಖರಾಗಿದ್ದು, 5,376 ಮಂದಿ ಮೃತಪಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿ 2,83,079 ಪ್ರಕರಣಗಳು ಖಚಿತವಾಗಿವೆ. 39,987 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇಟಲಿಯಲ್ಲಿ 33,689, ಫ್ರಾನ್ಸ್‌ನಲ್ಲಿ 29,068 ಹಾಗೂ ಸ್ಪೇನ್‌ನಲ್ಲಿ 27,133 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಗುರುವಾರ ರಾತ್ರಿ 8ರ ವರೆಗೆ1,06,737 ಪ್ರಕರಣಗಳು ಸಕ್ರಿಯವಾಗಿವೆ. 6,075 ಸೋಂಕಿತರು ಮೃತಪಟ್ಟಿದ್ದು, 1,04,106 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.