ADVERTISEMENT

ವಿಶ್ವ ಯುದ್ಧ ಅನಾಥರ ದಿನ: ಏನಿದರ ಮಹತ್ವ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2022, 7:10 IST
Last Updated 6 ಜನವರಿ 2022, 7:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯುದ್ಧಗಳಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಜನವರಿ 6 ರಂದು ‘ವಿಶ್ವ ಯುದ್ಧ ಅನಾಥರ ದಿನ’ವನ್ನು ಆಚರಿಸಲಾಗುತ್ತದೆ.

ಜಗತ್ತಿನಾದ್ಯಂತ ನಡೆದ ಯುದ್ಧಗಳಲ್ಲಿ ಕೋಟ್ಯಂತರ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು, ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಇಂತಹ ಮಕ್ಕಳ ಪರಿಸ್ಥಿತಿ ಕುರಿತು ಜನರಲ್ಲಿ ಅರಿವು ಮೂಡಿಸಲು ಮತ್ತು ಸಹಾಯ ಮಾಡಲು ಪ್ರಾನ್ಸ್‌ ಮೂಲದ ಸಂಸ್ಥೆ(ಎಸ್‌ಒಎಸ್‌ ಎನ್ಫಾಂಟ್ಸ್ ಮತ್ತು ಡಿಟ್ರೆಸಸ್) ಈ ದಿನಾಚರಣೆಗೆ ನಾಂದಿ ಹಾಡಿತು.

ಒಬ್ಬ ಅಥವಾ ಇಬ್ಬರು ಪೋಷಕರನ್ನು ಸಂಘರ್ಷಗಳಲ್ಲಿ ಕಳೆದುಕೊಂಡ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ‘ಯುದ್ಧ ಅನಾಥ’ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯು ವ್ಯಾಖ್ಯಾನಿಸಿದೆ.

ADVERTISEMENT

2015 ರಲ್ಲಿ ಸುಮಾರು 14 ಕೋಟಿ ‘ಯುದ್ಧ ಅನಾಥರು’ ಅಸ್ತಿತ್ವದಲ್ಲಿದ್ದರು. 1990-2001 ರ ನಡುವಿನ ಅವಧಿಯಲ್ಲಿ, ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. 2001 ರಿಂದ ಶೇ 0.7ರಷ್ಟು ಕಡಿಮೆ ಆಗಿದೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ ಮಾಹಿತಿ ನೀಡಿದೆ. ‌

ಯಾವುದೇ ಯುದ್ಧದಲ್ಲಿ ಮಕ್ಕಳು ಅಪೌಷ್ಟಿಕತೆ, ಶಿಕ್ಷಣದ ಕೊರತೆ, ಸ್ಥಳಾಂತರ, ದೈಹಿಕ ಮತ್ತು ಮಾನಸಿಕ ಆಘಾತವನ್ನು ಅನುಭವಿಸುತ್ತಾರೆ. 2020ರಲ್ಲಿ ನಡೆದ ಸಂಘರ್ಷಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ವಿರುದ್ಧ 26,425 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇಥಿಯೋಪಿಯಾ, ಅಫ್ಗಾನಿಸ್ತಾನ, ಸಿರಿಯಾ ಮತ್ತು ಮುಂತಾದ ದೇಶಗಳಲ್ಲಿ ಸಂಘರ್ಷ ಮುಂದುವರಿದಿದೆ. ಈ ಪ್ರದೇಶಗಳಲ್ಲಿರುವ ಮಕ್ಕಳು ಅಭದ್ರತೆ, ಕೋಮು ಹಿಂಸಾಚಾರ, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.

ವಿಶ್ವ ಯುದ್ಧ ಅನಾಥರ ದಿನದಂದು ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.