ADVERTISEMENT

ಬಾಹ್ಯಾಕಾಶ ದೂರದರ್ಶಕ ‘ಜೇಮ್ಸ್‌ ವೆಬ್‌’ ಉಡಾವಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 20:23 IST
Last Updated 25 ಡಿಸೆಂಬರ್ 2021, 20:23 IST
ಬಾಹ್ಯಾಕಾಶ ದೂರದರ್ಶಕ ‘ಜೇಮ್ಸ್‌ ವೆಬ್‌’ ಅನ್ನು ಫ್ರೆಂಚ್‌ ಗಯಾನಾದ ಕುರು ಉಪಗ್ರಹ ಉಡಾವಣಾ ಕೇಂದ್ರದಿಂದ ಶನಿವಾರ ಉಡಾಯಿಸಲಾಯಿತು– ಎಎಫ್‌ಪಿ ಚಿತ್ರ
ಬಾಹ್ಯಾಕಾಶ ದೂರದರ್ಶಕ ‘ಜೇಮ್ಸ್‌ ವೆಬ್‌’ ಅನ್ನು ಫ್ರೆಂಚ್‌ ಗಯಾನಾದ ಕುರು ಉಪಗ್ರಹ ಉಡಾವಣಾ ಕೇಂದ್ರದಿಂದ ಶನಿವಾರ ಉಡಾಯಿಸಲಾಯಿತು– ಎಎಫ್‌ಪಿ ಚಿತ್ರ   

ಕುರು (ಫ್ರೆಂಚ್ ಗಯಾನಾ): ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಎನ್ನಲಾಗಿರುವ ನಾಸಾದ ‘ಜೇಮ್ಸ್‌ ವೆಬ್‌’ ದೂರದರ್ಶಕವನ್ನು ಫ್ರೆಂಚ್‌ ಗಯಾನಾದ ಕುರು ಉಪಗ್ರಹ ಉಡಾವಣಾ ಕೇಂದ್ರದಿಂದ ಶನಿವಾರ ಉಡಾಯಿಸಲಾಯಿತು.

ಇದು ಭೂಮಿಯಿಂದ 15 ಲಕ್ಷ ಕಿ.ಮೀ (9,30,000 ಮೈಲು) ದೂರದ ಕಕ್ಷೆ ಸೇರುವ ಗುರಿ ಹೊಂದಿದೆ. ಈ ದೂರದರ್ಶಕವು ಬಲಿಷ್ಠ ‘ಏರಿಯನ್‌ 5’ ರಾಕೆಟ್‌ನೊಂದಿಗೆ ಪ್ರಯಾಣ ಬೆಳೆಸಿದ್ದು, ಒಂದು ತಿಂಗಳಲ್ಲಿ ತನ್ನ ಗಮ್ಯ ಸ್ಥಾನ ತಲುಪಲಿದೆ.

ಹಬಲ್ ದೂರದರ್ಶಕಕ್ಕಿಂತ ಹಲವು ಪಟ್ಟು ಶಕ್ತಿಶಾಲಿಯಾಗಿರುವ ಇದು, ವಿಶ್ವ ಹೇಗೆ ಉಗಮವಾಯಿತು ಎಂಬುದನ್ನು ಅರಿತುಕೊಳ್ಳಲು ನೆರವಾಗಲಿದೆ. ನಾವು ಈವರೆಗೆ ನೋಡಿರುವ ಗೆಲಾಕ್ಸಿಗಳಿಗಿಂತಲೂ ಬಹುದೂರವಿರುವ ಗೆಲಾಕ್ಸಿಗಳನ್ನು ಈ ದೂರದರ್ಶಕವು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.