ADVERTISEMENT

ನಾಪತ್ತೆಯಾಗಿದ್ದ ವಿಮಾನದ ಅವಶೇಷ ಪತ್ತೆ, 28 ಸಾವು?

ಏಜೆನ್ಸೀಸ್
Published 6 ಜುಲೈ 2021, 11:32 IST
Last Updated 6 ಜುಲೈ 2021, 11:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೋ: ರಷ್ಯಾದ ಪೂರ್ವವಲಯದ ಕಮ್‌ಚಾಟ್ಕಾದಿಂದ ನಾಪತ್ತೆಯಾಗಿದ್ದ ವಿಮಾನದ ಭಗ್ನಾವಶೇಷ ಒಕೋಸ್ಕ್‌ ಸಮುದ್ರತೀರದ ವಿಮಾನನಿಲ್ದಾಣದ ರನ್‌ವೇಯ ಐದು ಕಿ.ಮೀ.ದೂರದಲ್ಲಿ ಮಂಗಳವಾರ ಪತ್ತೆಯಾಗಿದೆ.

ಆಂಟನಿ ಎಎನ್‌–26 ವಿಮಾನದಲ್ಲಿ 22 ಪ್ರಯಾಣಿಕರು, ಆರು ಮಂದಿ ಸಿಬ್ಬಂದಿ ಇದ್ದರು. ವಿಮಾನ ಕಮ್‌ಚಾಟ್ಕಾದಿಂದ ಪಲಾನಾ ಪಟ್ಟಣಕ್ಕೆ ತೆರಳಬೇಕಿದ್ದು, ಸಂಪರ್ಕ ಕಳೆದುಕೊಂಡ ನಂತರ ಸುಳಿವು ಸಿಕ್ಕಿರಲಿಲ್ಲ.

ಕಮ್‌ಚಾಟ್ಕಾದ ಗವರ್ನರ್‌ ವಾಡಿಮಿರ್ ಸೊಲೊಡೊವ್ ಪ್ರಕಾರ, ವಿಮಾನದ ಪ್ರಮುಖ ಭಾಗ ಸಮುದ್ರ ತೀರದಲ್ಲಿ, ಉಳಿದ ಅವಶೇಷಗಳು ಸ್ವಲ್ಪದೂರದಲ್ಲಿ ಪತ್ತೆಯಾಗಿವೆ. ಯಾರೊಬ್ಬರೂ ಬದುಕುಳಿದಿರುವ ಸಂಭವವಿಲ್ಲ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.