ADVERTISEMENT

ಚೀನಾದಲ್ಲಿ ಮತ್ತೊಮ್ಮೆ ಸೋಂಕಿನ ಆತಂಕ: ವುಹಾನ್‌ನಲ್ಲಿ 11 ಲಕ್ಷ ಜನರ ಪರೀಕ್ಷೆ ಆರಂಭ

ಪಿಟಿಐ
Published 14 ಮೇ 2020, 19:45 IST
Last Updated 14 ಮೇ 2020, 19:45 IST
ವುಹಾನ್‌ನಲ್ಲಿ ಸಾಮೂಹಿಕವಾಗಿ ನಡೆಯುತ್ತಿರುವ ಸೋಂಕು ಪತ್ತೆ ಪರೀಕ್ಷಾ ಕಾರ್ಯ
ವುಹಾನ್‌ನಲ್ಲಿ ಸಾಮೂಹಿಕವಾಗಿ ನಡೆಯುತ್ತಿರುವ ಸೋಂಕು ಪತ್ತೆ ಪರೀಕ್ಷಾ ಕಾರ್ಯ    

ಬೀಜಿಂಗ್‌/ವುಹಾನ್‌: ಚೀನಾದಲ್ಲಿಎರಡನೇ ಬಾರಿ ಕೊರೊನಾ ಸೋಂಕು ಹರಡುವ ಆತಂಕದ ನಡುವೆಯೇ 11 ಲಕ್ಷಕ್ಕೂ ಹೆಚ್ಚು ಜನರಿರುವ ವುಹಾನ್‌ನಲ್ಲಿ ಸಾಮೂಹಿಕವಾಗಿ ಸೋಂಕು ಪತ್ತೆ ಪರೀಕ್ಷೆಬುಧವಾರದಿಂದ ಆರಂಭವಾಗಿದೆ. ಮೇ 20ರ ವೇಳೆಗೆ ಈ ಪರೀಕ್ಷೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಚೀನಾದಲ್ಲಿ ಸದ್ಯಕ್ಕೆ ಪಿಡುಗು ನಿಯಂತ್ರಣದಲ್ಲಿದ್ದರೂ, ವಿರಳ ಪ್ರಕರಣಗಳಿಂದಾಗಿ ಸಾಮೂಹಿಕವಾಗಿ ಸೋಂಕು ಹರಡುವ ಅಪಾಯ ಇದೆ ಎಂದು ಪ್ರಮುಖ ಆರೋಗ್ಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು.

15 ಹೊಸ ಪ್ರಕರಣ:ಈ ನಡುವೆ ಚೀನಾದಲ್ಲಿ ಲಕ್ಷಣರಹಿತ ಸೋಂಕು ಇರುವ 12 ಪ್ರಕರಣಗಳು ಸೇರಿದಂತೆ ಹೊಸದಾಗಿ ಒಟ್ಟು15 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ADVERTISEMENT

'ಲಿಯಾನಿಂಗ್‌ ಪ್ರಾಂತದಲ್ಲಿ ಎರಡು ಹಾಗೂ ಜಿಲಿನ್‌ ಪ್ರಾಂತದಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಇಲ್ಲಿ ಪರಿಚಿತರಿಂದಲೇ ಸೋಂಕು ತಗುಲಿದೆ. ಬುಧವಾರದ ವೇಳೆಗೆ ದೇಶದಲ್ಲಿ ಸೋಂಕು ದೃಢಪಟ್ಟ 82,929 ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ101ಜನರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು ಸಾವಿನ ಪ್ರಕರಣ 4,663' ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಹೇಳಿದೆ.

'ಲಕ್ಷಣರಹಿತ ಸೋಂಕು ಇರುವ712 ಜನರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಇವರಲ್ಲಿ574 ಜನರು ಹ್ಯುಬೆ ಹಾಗೂ ವುಹಾನ್‌ನವರು' ಎಂದು ಎನ್‌ಎಚ್‌ಸಿ ಹೇಳಿದೆ.

ಕಟ್ಟುನಿಟ್ಟಿನ ಕ್ರಮ: 'ಈಶಾನ್ಯ ಚೀನಾದ ಜಿಲಿನ್‌ ಪ್ರಾಂತದಲ್ಲಿ 21 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಎರಡು ಪ್ರಕರಣಗಳಲ್ಲಿ ಲಕ್ಷಣರಹಿತ ಸೋಂಕು ದೃಢಪಟ್ಟಿದೆ. ಆದ್ದರಿಂದ ಅಧಿಕಾರಿಗಳು ಸೋಂಕು ಹರಡುವುದನ್ನು ತಡೆಯಲು ಹೆಚ್ಚು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತಂದಿದ್ದಾರೆ' ಎಂದು ಉಪಮೇಯರ್‌ ಗೈ ಡಾಂಗ್‌ಪಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.