ADVERTISEMENT

ಎರಡನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟ: ವ್ಯಕ್ತಿ ಸಾವು

ಏಜೆನ್ಸೀಸ್
Published 8 ಏಪ್ರಿಲ್ 2022, 11:38 IST
Last Updated 8 ಏಪ್ರಿಲ್ 2022, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೆರುಗ್ವೆ (ಎಎಫ್‌ಪಿ): ಉತ್ಖನನ ಕಾರ್ಯ ನಡೆಸುವಾಗ ಎರಡನೇ ಮಹಾಯುದ್ಧ ಅವಧಿಯ ಬಾಂಬ್‌ವೊಂದು ಇಲ್ಲಿ ಸ್ಫೋಟಿಸಿದೆ. ಒಸ್ಟ್ರಾವಾದ ಜೆಕ್‌ ನಗರದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸತ್ತಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಸ್ಫೋಟದ ಹಿಂದೆಯೇ ಘಟನಾ ಸ್ಥಳದ 300 ಮೀಟರ್‌ ವ್ಯಾಪ್ತಿಯಿಂದ 50 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಜೆಕ್‌ ಗಣರಾಜ್ಯದ ಈಶಾನ್ಯ ಭಾಗದಲ್ಲಿ 1945ರಲ್ಲಿ ವಿಶ್ವ ಯುದ್ಧದ ಅವಧಿಯಲ್ಲಿ ರೆಡ್ ಆರ್ಮಿ ಚಲನವಲನ ಕೈಗೊಂಡಿತ್ತು. ಈ ಭಾಗದಲ್ಲಿ ಆಗಿಂದಾಗ್ಗೆ ಯುದ್ಧದ ಶಸ್ತ್ರಾಸ್ತ್ರದ ಅವಶೇಷಗಳು ಪತ್ತೆಯಾಗುತ್ತವೆ. ವರ್ಷದ ಹಿಂದೆ ಒಸ್ಟ್ರಾವಾದಲ್ಲಿ ಸ್ಫೋಟಕ ವಸ್ತು ಪತ್ತೆಯಾದ ಹಿಂದೆಯೇ ಪೊಲೀಸರು ಸುಮಾರು 1,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.