ADVERTISEMENT

ಹವಾಮಾನ ಬದಲಾವಣೆ| ಕ್ರಿಯಾಯೋಜನೆ ಜಾರಿಗೆ ಚೀನಾ ಬದ್ಧ: ಜಿನ್‌ಪಿಂಗ್‌

ಪ್ಯಾರಿಸ್‌ ಒಪ್ಪಂದದ 5ನೇ ವಾರ್ಷಿಕೋತ್ಸವ

ಪಿಟಿಐ
Published 13 ಡಿಸೆಂಬರ್ 2020, 6:53 IST
Last Updated 13 ಡಿಸೆಂಬರ್ 2020, 6:53 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಬೀಜಿಂಗ್‌: ಹಮಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಚೀನಾ ಬದ್ಧ. ಪ್ಯಾರಿಸ್‌ ಒಪ್ಪಂದದಲ್ಲಿ ಉಲ್ಲೇಖಿಸಿರುವ ಕ್ರಮಗಳನ್ನು 2030ರ ವೇಳೆಗೆ ಅನುಷ್ಠಾನಕ್ಕೆ ತರಲಾಗುವುದು ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ.

ಪ್ಯಾರಿಸ್‌ ಹವಾಮಾನ ಒಪ್ಪಂದದ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶೃಂಗಸಭೆಯನ್ನು ಉದ್ದೇಶಿಸಿ ಅವರು ಆನ್‌ಲೈನ್‌ ಮೂಲಕ ಮಾತನಾಡಿದರು.

‘ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆಯ ಪ್ರಮಾಣವನ್ನು2005ರಲ್ಲಿ ಇದ್ದದ್ದಕ್ಕಿಂತ ಶೇ 65ರಷ್ಟು ಕಡಿಮೆ ಇರುವಂತೆ ಕ್ರಮ ಕೈಗೊಳ್ಳುವುದು. ಪಳೆಯುಳಿಕೆ ಆಧಾರಿತ ಇಂಧನ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಪಳೆಯುಳಿಕೆಯೇತರ ಇಂಧನದ ಬಳಕೆಯನ್ನು ಶೇ 25ರಷ್ಟು ಹೆಚ್ಚಳ ಮಾಡಲಾಗುವುದು’ ಎಂದೂ ಅವರು ಹೇಳಿದರು.

ADVERTISEMENT

‘2005ರಲ್ಲಿ ಚೀನಾದಲ್ಲಿದ್ದ ಅರಣ್ಯ ಪ್ರದೇಶವನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಪವನಶಕ್ತಿ ಮತ್ತು ಸೌರಶಕ್ತಿ ಬಳಸಿ ವಿದ್ಯುತ್‌ ಉತ್ಪಾದನೆಗೆ ಒತ್ತು ನೀಡಿ, 1.2 ಶತಕೋಟಿ ಕಿಲೊವಾಟ್‌ಗಿಂತಲೂ ಅಧಿಕ ವಿದ್ಯುತ್‌ ಉತ್ಪಾದಿಸಲಾಗುವುದು ಎಂದು ಷಿ ಹೇಳಿದರು’ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.