ADVERTISEMENT

ದಕ್ಷಿಣ ಸುಡಾನ್‌: 15 ಜನರ ಹತ್ಯೆಗೈದ ಯುವಕರು

ರಾಯಿಟರ್ಸ್
Published 20 ಮಾರ್ಚ್ 2024, 11:34 IST
Last Updated 20 ಮಾರ್ಚ್ 2024, 11:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜುಬಾ: ದಕ್ಷಿಣ ಸುಡಾನ್‌ನ ಪಿಬೋರ್‌ ಪ್ರಾಂತ್ಯದಲ್ಲಿ ಕಮಿಷನರ್‌ ಸೇರಿದಂತೆ 15 ಜನರನ್ನು ಅಪರಿಚಿತ ಯುವಕರ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ಕಮಿಷನರ್‌ ಅವರು ತಮ್ಮ ತಂಡದೊಂದಿಗೆ ಮಂಗಳವಾರ ಗ್ರಾಮವೊಂದಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದ ವೇಳೆ ದಾಳಿ ನಡೆದಿದ್ದು, ಕಮಿಷನರ್‌, ಡೆಪ್ಯುಟಿ ಆರ್ಮಿ ಕಮಾಂಡರ್‌, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿ 15 ಜನ ಮೃತಪಟ್ಟಿದ್ದಾರೆ’ ಎಂದು ಗ್ರೇಟರ್‌ ಪಿಬೋರ್‌ ಆಡಳಿತ ಪ್ರದೇಶದ ಮಾಹಿತಿ ಸಚಿವ ಅಬ್ರಹಾಂ ಕೆಲಂಗ್‌ ತಿಳಿಸಿದ್ದಾರೆ.

ADVERTISEMENT

‘ದಾಳಿಕೋರರು ಅನ್ಯೂಯಾಕ್‌ ಸಮುದಾಯದಕ್ಕೆ ಸೇರಿದ ಯುವಕರು ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ಮಾಹಿತಿ ನೀಡಿದರು.

ಮುರ್ಲೆ ಸಮುದಾಯವೇ ಹೆಚ್ಚಾಗಿರುವ ಬೊಮ ಕೌಂಟಿಯಲ್ಲಿ ಮುರ್ಲೆ ಮತ್ತು ಅನ್ಯೂಯಾಕ್‌, ನ್ಯೂರೆ, ದಿಂಕಸ್‌ ಜನಾಂಗಗಳ ನಡುವೆ ಹಿಂಸಾಚಾರ ನಡೆಯುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.