ADVERTISEMENT

ಜಪಾನ್‌ ಮತಗಟ್ಟೆ ಸಮೀಕ್ಷೆ: ಪ್ರಧಾನಿ ತಕೈಚಿ ನೇತೃತ್ವದ ಮೈತ್ರಿಕೂಟಕ್ಕೇ ಬಹುಮತ

ಏಜೆನ್ಸೀಸ್
Published 8 ಫೆಬ್ರುವರಿ 2026, 15:31 IST
Last Updated 8 ಫೆಬ್ರುವರಿ 2026, 15:31 IST
ಸನೇ ತಕೈಚಿ
ಸನೇ ತಕೈಚಿ   

ಟೋಕಿಯೊ: ಭಾನುವಾರ ನಡೆದ ಸಂಸತ್‌ ಚುನಾವಣೆಯಲ್ಲಿ ಜಪಾನ್‌ ಪ್ರಧಾನಿ ಸನೇ ತಕೈಚಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ಬಹುಮತ ಪಡೆಯುವುದು ನಿಚ್ಚಳವಾಗಿದೆ ಎಂದು ಎನ್‌ಎಚ್‌ಕೆ ಪಬ್ಲಿಕ್‌ ಟೆಲಿವಿಷನ್‌ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳು ಅಂದಾಜಿಸಿವೆ.

ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವು ಹೊರಬಿದ್ದಿದ್ದು, ತಕೈಚಿ ಅವರ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ನೇತೃತ್ವದ ಮೈತ್ರಿಕೂಟವು ಮೂರನೇ ಎರಡಷ್ಟು ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ಎನ್‌ಎಚ್‌ಕೆ ಹೇಳಿದೆ.

ಜಪಾನ್‌ನ ಕೆಳಮನೆಯು 465 ಸಂಖ್ಯಾಬಲವನ್ನು ಹೊಂದಿದೆ.

ADVERTISEMENT

ತಕೈಚಿ ನೇತೃತ್ವದ ಪಕ್ಷವು ಹಾಲಿ ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಚೀನಾದೊಂದಿಗೆ ಬಿಕ್ಕಟ್ಟು ಹೆಚ್ಚಿರುವ ಪ್ರಸ್ತುತ ಸಂದರ್ಭದಲ್ಲಿ, ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಜಪಾನ್‌ ಆರ್ಥಿಕತೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿರುವ ಬಲಪಂಥೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಈ ಫಲಿತಾಂಶವು ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.