ADVERTISEMENT

50 ವರ್ಷಗಳ ಹಿಂದೆ | ಅಮೆರಿಕದ ಜೊತೆ ಬಾಂಧವ್ಯ ವೃದ್ಧಿ: ರಷ್ಯಾದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 22:17 IST
Last Updated 11 ಆಗಸ್ಟ್ 2024, 22:17 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಮಾಸ್ಕೊ, ಆಗಸ್ಟ್ 11– ಅಮೆರಿಕ–ರಷ್ಯಾ ಬಾಂಧವ್ಯವನ್ನು ಮತ್ತಷ್ಟು ಉತ್ತಮಗೊಳಿಸುವ ದೃಢ ಕಾರ್ಯಕ್ರಮವನ್ನು ತಾನು ಮುಂದುವರಿಸಿಕೊಂಡು ಹೋಗುವುದಾಗಿ ಸೋವಿಯತ್ ಯೂನಿಯನ್ ಇಂದು ಮತ್ತೊಮ್ಮೆ ಸಾರಿದೆ.

ಅಮೆರಿಕದಲ್ಲಿ ಅಧ್ಯಕ್ಷರ ಬದಲಾವಣೆ ಸಂದರ್ಭದಲ್ಲಿ ‘ಪ್ರಾವ್ಡಾ’ ಪತ್ರಿಕೆ ಸಂಪಾದಕೀಯ ಲೇಖನ
ಬರೆಯುತ್ತಾ ಸೋವಿಯತ್ ಯೂನಿಯನ್–ಅಮೆರಿಕ ವಿರಸ ನಿವಾರಣೆಗೆ ಕಾರ್ಯಕ್ರಮ ನಿಲ್ಲದಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಲಾಗಿದೆ.

ನಗರದಲ್ಲಿ ನಕಲಿ ವಿದೇಶಿ ವ್ಹಿಸ್ಕಿ ತಯಾರಿಕೆಯ ಭಾರಿ ತಂಡದ ಪತ್ತೆ

ADVERTISEMENT

ಬೆಂಗಳೂರು, ಆಗಸ್ಟ್ 11– ನಕಲಿ ವಿದೇಶಿ ವ್ಹಿಸ್ಕಿ ತಯಾರಿಕೆಯ ಭಾರಿ ತಂಡವೊಂದನ್ನು ರಾಜ್ಯದ ಸಿ.ಐ.ಡಿ. ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧದಲ್ಲಿ ಮುಂಬೈ, ಕಲ್ಕತ್ತ ನಗರಗಳಿಗೆ ಸೇರಿದ ಇಬ್ಬರು ಹಾಗೂ ನಗರಕ್ಕೆ ಸೇರಿದ ಮೂವರು ಹೀಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ತಂಡಕ್ಕೆ ಸೇರಿದ ಪ್ರಮುಖ ವ್ಯಕ್ತಿ ಕುವೈತಿಗೆ ಓಡಿಹೋಗಿದ್ದಾನೆಂದು ಹೇಳಲಾಗಿದೆ.

ನಗರದ ದಂಡು ಪ್ರದೇಶದ ಮನೆಯಲ್ಲಿ ನಕಲಿ ವಿದೇಶಿ ವ್ಹಿಸ್ಕಿ ತಯಾರಿಕೆಯ ಸಾಮಗ್ರಿಗಳನ್ನು, ನಕಲಿ ವಿದೇಶಿ ವ್ಹಿಸ್ಕಿಯ 50 ಸೀಸೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.