
ಬಸವಣ್ಣ
ಅಂತರಂಗದ ಅನುಭವ ಮಂಟಪದ ಸಾಕಾರ ಮೂರ್ತಿಯಾಗಿ ಅಕ್ಷರ ಜ್ಞಾನವಿಲ್ಲದ 770 ಶಿವಶರಣರನ್ನು ಏಕಕಾಲದಲ್ಲಿ ಅಮರಗಣoಗಳಾಗಿಸಿದ ಅನುಭವದ ಮೂರ್ತಿ ಅಪ್ಪ ಬಸವಣ್ಣನವರು.
ಜಾತಿ, ಮತ, ಪಂಥವನ್ನು ಮೀರಿ, ಸಮಸ್ತ ವಿಶ್ವ ಪರಿಪೂರ್ಣ ಶಿವ ತತ್ವವನ್ನು ಅಂಗಯಲ್ಲಿರಿಸಿ ಅನುಭಾವ ಪ್ರಭೆಯನ್ನು, ಶಿವಪೂರವನ್ನು ಬಸವ ಕಲ್ಯಾಣದ ಮಾಡಿದ ಮಹಾ ಶಿವಯೋಗಿ.
ಏನೇನ್ನಲರಿಯೇ ಎಂಬ ಸಾಮಾನ್ಯರನ್ನು ಶಿವಶರಣರನ್ನಾಗಿಸಿ ಅನುಭವ ಮಂಟಪದಲ್ಲಿ ಅಪ್ರತಿಮ ಶಿವಯೋಗ ಸಂಪನ್ನರಾಗಿಸಿದ ಕೀರ್ತಿ ಅಪ್ಪ ಬಸವಣ್ಣನವರದು,
ತಾನು ಕಿರಿಯನಾಗಿ ಶಿವಶರಣರನ್ನು ಭವ ಭಂದನದಿಂದ ಮುಕ್ತಗೊಳಿಸಿ ಶಿವಶರಣರ ಶ್ರೀ ಪಾದವ ತೋರಿ ಬದುಕಿಸು ಕೂಡಲಸಂಗಮದೇವ.. ಎಂದವರು.
ಎಲ್ಲಾ ಪವಿಯನ್ನು ಬದಿಗೊತ್ತಿ ಶರಣರ ಪಾದವೇ ಅಪ್ರತಿಮವೆಂದು, ದಾಸೋಹ ಮೂರ್ತಿಯಾಗಿ ವಿಶ್ವನ್ನೇ ನಾಚಿಸುವ ಶಿವಯೋಗ ಸಾಮ್ರಾಜ್ಯ ಸ್ಥಾಪಕರಾದ ಬಸವಣ್ಣನವರು.
ತಮ್ಮ ಜೀವಿತಾವಧಿಯನ್ನು ಅತ್ಯಂತ ಸರಳವಾಗಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಅಪ್ರತಿಮ ಸಾಧಕರ ಮಹಾ ನಾಯಕರು.
ಅರಿತರೆ ಶರಣ ಮರೆತರೆ ಮನವನೆಂಬ ನಿಜನೆಲೆಯ ಸಾಕಾರ ಮೂರ್ತಿಗಳು ಅಣ್ಣನವರು. ರಾಜಕೀಯವು ಶರಣರ ಪಾದಧೂಳಿಗೆ ಸಮವೆಂದು ಬಿಜ್ಜಳನ ಭಂಢಾರಿಯಾದರು. ಅದನ್ನು ತೃಣದ ಸಮಾನವೆಂದು ತೊರೆದು ಕಲ್ಯಾಣದ ಕ್ರಾಂತಿಗೆ ಮುನ್ನುಡಿ ಬರೆದ ಧೀರ ಶಿವಯೋಗಿ.
ಅನಂತಕಾಲ ಶಿವಶರಣರ ಯೋಗ ಕ್ಷೇಮವನ್ನೇ ಬಯಸಿದ, ಅವರ ನೆತ್ತರಿಗೆ ತನ್ನ ಅನುಭಾವ ನೆಲೆಯಿತ್ತ ಯೋಗಿ ಅಪ್ಪ ಬಸವಣ್ಣನವರು.
ನಿತ್ಯ ಜಂಗಮ ದಾಸೋಹ ನಡೆಸಿ ಶಿವ ಥಿಂತಿಣಿಯ ಅನುಭಾವ ಸಾರವನ್ನು ವಚನ ಸಾಹಿತ್ಯದಲ್ಲಿ ಸಂಗ್ರಹಿಸಿಟ್ಟ ಧೀಮಂತ ಶರಣರ ನಾಯಕ ಬಸವಣ್ಣನವರು.
ಹರಳಯ್ಯನ ಪಾದುಕೆಯನ್ನು ಶಿರದಲ್ಲಿರಿಸಿ ಕಂಗಳ ಕೊನೆಯ ಮೊನೆಯ ಮೂರುತಿ ಇಷ್ಟಲಿಂಗಯ್ಯನ ಪಾದಕ್ಕೆ ಅರ್ಪಿತವ ಮಾಡಿದ ಮಹಾ ನಿರಂಜನ ಬಸವಣ್ಣನವರು.
ನಾಲ್ಕು ಲಕ್ಷದ ಮೂವತ್ತಾರು ಸಾವಿರ ವಚನವ ಕನ್ನಡಮ್ಮನ ಸಾಹಿತ್ಯಕ್ಕೆ ನೀಡಿದ ಮಹಾ ಮಹಿಮ ಅಪ್ಪ ಬಸವಣ್ಣನವರು ಬಗ್ಗೆ ಒಂದು ವಚನ ಇಲ್ಲಿದೆ..
"ಹೇಳಲಸದಳ ನಿಮ್ಮ ಮಹಿಮೆ
ಕಾರಣ ಪುರುಷನೆನ್ನಲೇ,
ಮಹಾನುಭಾವಿ ಎನ್ನಲೇ,
ಶಿವಶರಣರ ಹೃದಯವಾಸಿ
ಶ್ರೀ ಗುರುಬಸವಪ್ರಭುವೆ
ಮುರುಘೇಶನ ಕರ್ತೃ ನೀ ಬಸವೇ‘‘
ಲೇಖನ; ಬಸವಾಕ್ಷ ಸ್ವಾಮೀಜಿ, ಶ್ರೀ ವಿರಕ್ತ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.