ADVERTISEMENT

ಹಾವಿನ ಡಾಕ್ಟರು!

ಬಿ.ಎನ್.ಮಲ್ಲೇಶ್
Published 17 ಅಕ್ಟೋಬರ್ 2020, 18:31 IST
Last Updated 17 ಅಕ್ಟೋಬರ್ 2020, 18:31 IST
ಚುರುಮುರಿ
ಚುರುಮುರಿ   

‘ಹಲೋ... ಮಿನಿಸ್ಟ್ರು ಸಾಹೇಬ್ರಿಗೆ ನಮಸ್ಕಾರ. ನಾನ್ಸಾ ತೆಪರೇಸಿ, ನಿಮ್ ಶಿಷ್ಯ...’

‘ಗೊತ್ತಾತು ಹೇಳಪ, ಏನಾದ್ರು ಕೆಲ್ಸ ಇದ್ರಷ್ಟೇ ನೀ ಫೋನ್ ಮಾಡೋದು. ಹೇಳು ಏನ್ಸಮಾಚಾರ?’

‘ಏನಿಲ್ಲ ಸಾ, ಈ ಸಲ ರಾಜ್ಯೋತ್ಸವ ಪ್ರಶಸ್ತಿ ಕೊಡಲ್ವ?’

ADVERTISEMENT

‘ಯಾಕಪ್ಪ, ನಿಂಗೇನಾದ್ರು ಬೇಕಿತ್ತಾ?’

‘ನೀವೊಳ್ಳೆ, ಅಂಥ ಒಳ್ಳೆ ಕೆಲ್ಸ ನಾನೇನ್ ಮಾಡಿದೀನಿ ಸಾ, ಪೇಪರ್‍ನಲ್ಲಿ ಕೆಲವ್ರು ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಬ್ಯಾಡ, ಕೊರೊನಾ ಅದು ಇದು ಅಂತ ಹೇಳಿಕೆ ಕೊಟ್ಟಿದ್ರು ಅದ್ಕೆ ಕೇಳಿದೆ’.

‘ಅವರದೆಲ್ಲ ಇರ‍್ಲಿ, ಈಗ ನೀ ಹೇಳು, ಪ್ರಶಸ್ತಿ ಕೊಡಬೇಕೋ ಬ್ಯಾಡೋ?’

‘ಕೊಡ್ಬೇಕು ಸಾ, ನೀವು ಸರ್ಕಾರದೋರು ಎಂತೆಂಥದ್ಕೋ ಖರ್ಚು ಮಾಡ್ತೀರಂತೆ, ಸಾಹಿತಿಗಳಿಗೆ, ಸಮಾಜ ಸೇವಕರಿಗೆ ಖರ್ಚು ಮಾಡಲ್ಲ ಅಂದ್ರೆ ಹೆಂಗೆ?’

‘ನಿಂದೂ ಪಾಯಿಂಟ್ ಕಣಯ್ಯ, ಒಪ್ಪಿದೆ’.

‘ಮತ್ತಿನ್ನೇನ್ ಸಾ, ಹಿಂದೆ ಪ್ರಶಸ್ತಿ ತಗಂಡಿರೋರೆಲ್ಲ ಈಗ ಪ್ರಶಸ್ತಿ ಕೊಡಬ್ಯಾಡಿ ಅಂದ್ರೆ? ಕೊರೊನಾಕ್ಕೆ ಸಾವಿರಾರು ಕೋಟಿ ಖರ್ಚು ಮಾಡ್ತೀರಿ, ಅಂಥಾದ್ರಲ್ಲಿ ಎರಡು ಕೋಟಿ ಖರ್ಚು ಮಾಡಿ ಪ್ರಶಸ್ತಿ ಕೊಟ್ರೆ ನಿಮ್ ಗಂಟೇನ್ ಹೋಗ್ತತಿ?’

‘ಆತು ಬಿಡಪ, ಟೆನ್‍ಶನ್ ತಗಾಬೇಡ. ಈಗ ನಿಮ್ ಕಡೆ ಯಾರಿಗೆ ಪ್ರಶಸ್ತಿ ಕೊಡ್ಬೇಕು?’

‘ನಮ್ಮೂರಲ್ಲಿ ಒಬ್ರು ಹಾವಿನ ಡಾಕ್ಟರು ಅದಾರೆ, ಅವರಿಗೆ...’

‘ಏಯ್, ಹಾವು ಹಿಡಿಯೋರಿಗೆಲ್ಲ ಪ್ರಶಸ್ತಿ ಕೊಡೋಕಾಗಲ್ಲ...’

‘ಯಾಕ್ಸಾ? ಅದೂ ಸಮಾಜ ಸೇವೆ ಅಲ್ವ? ಇವ್ರು ಹಾವು ಹಿಡಿಯೋರಲ್ಲ, ಹಾವಿನ ಡಾಕ್ಟ್ರು...’

‘ಅಂದ್ರೆ ? ಹಾವು ಕಡಿದೋರಿಗೆ ಔಷಧಿ ಕೊಡೋರಾ?’‌

‘ಅಲ್ಲ ಸಾ, ಹಾವಿಗೆ ಜ್ವರ ಬಂದ್ರೆ ಔಷಧಿ ಕೊಡೋರು...!’

ಮಿನಿಸ್ಟರಿಗೆ ಮಾತೇ ಹೊರಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.