ADVERTISEMENT

ಚರ್ಚೆ | RSS ಬಗ್ಗೆ ದೇವನೂರು ಲೇಖನ: 'ಸಿದ್ಧಾಂತದ ಸೆರೆಯಲ್ಲಿ ಸಿಲುಕಿದ ಚಿಂತನೆ'

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 23:59 IST
Last Updated 10 ಅಕ್ಟೋಬರ್ 2025, 23:59 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ದೇವನೂರ ಮಹಾದೇವ ಅವರ ಲೇಖನವು ಆರ್‌ಎಸ್‌ಎಸ್‌ ಕುರಿತು ಅವರ ಅಪೂರ್ಣ ಅಧ್ಯಯನ ಮತ್ತು ಪೂರ್ವಗ್ರಹಗಳ ಪ್ರತಿಬಿಂಬ. ತಮ್ಮನ್ನು ‘ಮುಕ್ತ ಚಿಂತಕ’ ಎಂದು ಕರೆದುಕೊಳ್ಳುವ ಅವರು, ಕಾರ್ಲ್ ಮಾರ್ಕ್ಸ್‌ನ ವರ್ಗಸಂಘರ್ಷದ ಸೀಮಿತ ಚೌಕಟ್ಟಿನಲ್ಲಿಯೇ ಬಂಧಿತರಾಗಿರುವುದು ವಿಪರ್ಯಾಸ.

ಸಂಘದ ಆಳ ಮತ್ತು ಅಗಲವನ್ನು ಅರಿಯಲು ಕೇವಲ ಪುಸ್ತಕದ ಓದು ಸಾಕಾಗದು; ಶಾಖೆಗೆ ಬಂದು ಅದರ ಸ್ಪಂದನೆಯನ್ನು ಅನುಭವಿಸಬೇಕು. ಆರ್‌ಎಸ್‌ಎಸ್ ಶಾಖೆಯು ಭಾರತದಲ್ಲಿ ಜಾತಿ-ಭೇದ ಅಸ್ತಿತ್ವದಲ್ಲೇ ಇಲ್ಲದ ಏಕೈಕ ಸ್ಥಳ. ಇಲ್ಲಿ ಎಲ್ಲ ಸ್ವಯಂಸೇವಕರು ಒಂದೇ ಸಾಲಿನಲ್ಲಿ ನಿಂತು ವ್ಯಾಯಾಮ ಮಾಡುತ್ತಾರೆ, ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ, ಆಟ ಆಡುತ್ತಾರೆ, ಒಂದೇ ಧ್ವಜಕ್ಕೆ ಪ್ರಣಾಮ ಸಲ್ಲಿಸುತ್ತಾರೆ. ‘ಸಮಾನತೆ’ ಬಗ್ಗೆ ಘೋಷಣೆ ಕೂಗುವ ರಾಜಕೀಯ ಪಕ್ಷಗಳು ತಮ್ಮದೇ ಸಂಘಟನೆಯಲ್ಲಿ ಅದನ್ನು ಜಾರಿಗೊಳಿಸಲು ವಿಫಲವಾಗಿವೆ. ಆದರೆ ಸಂಘ ಎಂದೂ, ಯಾರನ್ನೂ ಜಾತಿ ಕೇಳಿಲ್ಲ.

ADVERTISEMENT

ಸಂಘದ ಮೇಲೆ ‘ಕೋಮುವಾದಿ’ ಎಂಬ ಆರೋಪ ಮಾಡುವವರು, ಸಂಘದ ನೂರಾರು ಸಮಾಜಸೇವಾ ಯೋಜನೆಗಳತ್ತ ದೃಷ್ಟಿ ಹರಿಸಬೇಕು. ಸೇವಾ ಭಾರತಿ, ಹಳ್ಳಿಗಳಲ್ಲಿ ಶಾಲೆಗಳು, ಆಸ್ಪತ್ರೆಗಳು, ಬಾಲ ಸಂಸ್ಕಾರ ಕೇಂದ್ರಗಳು, ಅನಾಥಾಶ್ರಮಗಳು ಮತ್ತು ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಕೋಟ್ಯಂತರ ಜನರ ಬದುಕನ್ನು ಬದಲಾಯಿಸಿದೆ. ಸಮಾಜವನ್ನು ವಿಭಜನೆಯ ಬದಲಿಗೆ ಒಗ್ಗೂಡಿಸುವ ಇಷ್ಟು ದೊಡ್ಡ ಕಾರ್ಯವನ್ನು ಮಾಡಿದ ಇನ್ನೊಂದು ಸಂಸ್ಥೆ ಭಾರತದ ಇತಿಹಾಸದಲ್ಲಿ ಇಲ್ಲ. 

ಲೇಖಕ: ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.