ಆರ್ಎಸ್ಎಸ್ (ಪ್ರಾತಿನಿಧಿಕ ಚಿತ್ರ)
ಒಂದು ಪದವೂ ಅಳಿಸುವಂತಿಲ್ಲ ಎಂಬಷ್ಟು ದೇಮ ಬರೆದ ಲೇಖನ ನಿಖರವಾಗಿದೆ!
ಸರ್ವೋಚ್ಚ ನಾಯಕನ ಆಣತಿಯನ್ನು ಚಾಚೂ ತಪ್ಪದೇ ಅನುಸರಿಸುವ, ಅವನ ಮಾತು, ನಕಾಶೆಗಳನ್ನಷ್ಟೇ ನಂಬುವ ಒಂದು ಪಡೆ ನಿರ್ಮಾಣ ಆರ್‌ಎಸ್‌ಎಸ್‌ನ ಗುರಿ. ಇಂಥಾ ಹಲವಾರು ಪಂಥಗಳು ಜಗತ್ತಿನಾದ್ಯಂತ ಇವೆ. ಸಂಖ್ಯೆ ಕಡಿಮೆ ಇದ್ದಲ್ಲಿ ಯಾರನ್ನೂ ಮುಟ್ಟಿಸಿಕೊಳ್ಳದೇ ಕೂತಿರುತ್ತವೆ. ಸಂಖ್ಯಾಬಾಹುಳ್ಯ ದಕ್ಕಿದಾಗ ಭೀಕರ ಯಜಮಾನಿಕೆ ಶುರು ಮಾಡುತ್ತವೆ. ಆರ್‌ಎಸ್ಎಸ್, ಕಾಲಕಾಲದ ಸವಾಲುಗಳನ್ನು ನಿಭಾಯಿಸುವ ರಿಫ್ಲೆಕ್ಸ್ ಹೊಂದಿದೆ. ಅದಕ್ಕೇ ಅದು ಉಳಿದ ಜಾಗತಿಕ ವಿಕೃತ ಸಂಘಟನೆಗಳಿಗಿಂತ ಹೆಚ್ಚು ಬಲಾಢ್ಯವಾಗಿದೆ.
ಅರ್ಧ ಶತಮಾನದ ಹಿಂದೆ ತನ್ನ ಒಳತಿರುಳಾಗಿದ್ದ ಸಾಂಪ್ರದಾಯಿಕ ಚಾತುರ್ವರ್ಣದ ಅಧಿಪತ್ಯಕ್ಕೆ ಅದು ಹೊಸ ತಿರುವು ಕೊಟ್ಟಿದೆ. ನಾಲ್ಕು ವರ್ಣಗಳ ಆಚೆಯ ಸಮುದಾಯಗಳಿಗೆ ಅಧಿಕಾರ, ಸ್ಥಾನಮಾನಗಳ ಕೇಕ್‌ನ ಸಣ್ಣ ತುಣುಕು ಎಸೆದು ಊಟದ ಮೇಜಿನ ಮೂಲೆಯಲ್ಲಿ ಜಾಗ ಕೊಟ್ಟಿದೆ. ಈ ‘ಸಹಿಷ್ಣುತೆ’, ಪ್ರತಿರೋಧವನ್ನು ಜೀರ್ಣಿಸಿಕೊಳ್ಳುವ ತಂತ್ರ. ಆದ್ದರಿಂದಲೇ ಎಸ್‌ಸಿ, ಎಸ್‌ಟಿ ಮೀಸಲು ಸಂಸತ್/ ಶಾಸನ ಸಭಾ ಸ್ಥಾನಗಳಲ್ಲೂ ಬಿಜೆಪಿ ಹೆಚ್ಚು ಸ್ಥಾನ ಪಡೆದಿದೆ. ದ್ವೇಷಪೂರಿತ ಯಜಮಾನಿಕೆಯ ಪೌರುಷ ಪ್ರದರ್ಶನಕ್ಕೆ, ತನ್ಮೂಲಕ ಗಮನ ಸೆಳೆವ ಚಪಲಕ್ಕೊಲಿದ ಹಿಂದುಳಿದ ಜಾತಿ ಯುವಕರನ್ನೇ ಕಣಕ್ಕಿಳಿಸಿದೆ! ಈ ಕಾರ್ಯತಂತ್ರದ ಅರಿವಿಲ್ಲದೇ ಆರ್‌ಎಸ್‌ಎಸ್ ಶಕ್ತಿಯನ್ನು ಉಡುಗಿಸುವುದು ಹುತ್ತ ಕೆಡವಿದಷ್ಟೇ ನಿಷ್ಪ್ರಯೋಜಕ.
ಲೇಖಕ: ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.