ADVERTISEMENT

ಮಂಗಳವಾರ, 20-3-1962

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಮೊದಲಿಯಾರ್ ಸಮಿತಿ: ಶೀಘ್ರವೇ ನಿರ್ಧಾರ
ನವದೆಹಲಿ, ಮಾ. 19
- ವಾಸ್ತವ ಬಳಕೆದಾರರು ಮತ್ತು ವ್ಯವಸ್ಥಿತ ಆಮದುಗಾರರಿಗೆ ವರ್ಷಕ್ಕೊಮ್ಮೆ ಆಮದು ಲೈಸೆನ್ಸ್‌ಗಳನ್ನು ನೀಡುವುದು, ರಫ್ತು - ಸಹಕಾರಿ ಕೈಗಾರಿಕೆಗಳಿಗೆ ಅವಶ್ಯಕವಾದ ಹೆಚ್ಚುವರಿ ಕಚ್ಚಾ ಸಾಮಗ್ರಿಗಳಿಗಾಗಿ 25-30 ಕೋಟಿ ರೂಪಾಯಿಗಳ ಆವರ್ತ ನಿಧಿಯೊಂದನ್ನು ನಿರ್ಮಿಸುವುದು ಮತ್ತು ರಫ್ತು ಸ್ಥಿರೀಕರಣ ಮಂಡಲಿಯೊಂದರ ರಚನೆ ಇವು ರಾಮಸ್ವಾಮಿ ಮೊದಲಿಯಾರ್ ಸಮಿತಿ ಮಾಡಿರುವ ಪ್ರಮುಖ ಶಿಫಾರಸುಗಳಲ್ಲಿ ಕೆಲವು.

ಭಾರಿ ಅಣೆಕಟ್ಟೆಗೆ ಬದಲು ಅಡ್ಡ ಕಟ್ಟೆಗಳ ನಿರ್ಮಾಣ
ಮಡಿಕೇರಿ, ಮಾ. 19
- ಕೊಡಗು ಜಿಲ್ಲೆಯಲ್ಲಿ ಹಾರಂಗಿ ಹಾಗೂ ಕಂಬದಕಡ ಅಣೆಕಟ್ಟುಗಳ ನಿರ್ಮಾಣ ಯೋಜನೆ ಮತ್ತು ಹಾಸನ ಜಿಲ್ಲೆಯಲ್ಲಿ ಹೇಮಾವತಿ ಅಣೆಕಟ್ಟು ಯೋಜನೆಗಳ ಬಗ್ಗೆ ರಾಜ್ಯದ ಹೊಸ ಸರ್ಕಾರವು ಈಗಾಗಲೇ ಪುನರ್ ಪರಿಶೀಲಿಸಿ, ಹಿಂದಿನ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.