ಬೆಂಗಳೂರು, ಜುಲೈ 11– ರಾಜ್ಯ ಸರ್ಕಾರ ಖಾಸಗಿ ಬಂಡವಾಳ ಆಕರ್ಷಿಸಲು ಹಮ್ಮಿಕೊಂಡಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಖಾಸಗಿ ಉದ್ಯಮಿಗಳಿಂದ ಸ್ವೀಕರಿಸಿದ ಅರ್ಜಿ ಪರಿಶೀಲಿಸಿದ ನಂತರ ಇಂದು 27,050 ಕೋಟಿ ರೂಪಾಯಿಗಳ 254 ಯೋಜನೆಗಳಿಗೆ ಎಲ್ಲಾ ರೀತಿಯ ಅನುಮತಿ ನೀಡಿತು.
ವಿಧಾನಸೌಧದಲ್ಲಿ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ‘ಹೂಡಿಕೆದಾರರ ದಿನ’ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರೂ. 24,703 ಕೋಟಿ ಮೊತ್ತದ 59 ಬೃಹತ್, 2,347 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಅವಕಾಶ ಇರುವ ಸಣ್ಣ, ಮಧ್ಯಮ ಪ್ರಮಾಣದ ಯೋಜನೆ ಅನುಷ್ಠಾನಕ್ಕೆ ಎಲ್ಲಾ ಬಗೆ ಅನುಮತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.