ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 30–6–1995

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 19:30 IST
Last Updated 29 ಜೂನ್ 2020, 19:30 IST

ಎಂಜಿನಿಯರುಗಳ ಕಾರ್ಯವೈಖರಿಗೆ ಗೌಡರ ತರಾಟೆ
ಬೆಂಗಳೂರು, ಜೂನ್‌ 29–
ಲೋಕೋಪಯೋಗಿ ಇಲಾಖೆ, ನೀರಾವರಿ ಮತ್ತು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಳೆದ ಐದು ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಹಾಗೂ ಕಾರ್ಯವೈಖರಿಗಳ ಬಗೆಗೆ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ಎಂಜಿನಿಯರುಗಳನ್ನು ನೇರವಾಗಿ ಟೀಕಿಸಿ ಇಂದು ಇಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಇನ್ನು ಮೂರು ತಿಂಗಳ ಒಳಗಾಗಿ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ‘ವಾಮಮಾರ್ಗ’ ಹಿಡಿದು ಸಂಬಂಧಪಟ್ಟ ಎಂಜಿನಿಯರುಗಳ ವಿರುದ್ಧ ನೇರ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.

ಅವ್ಯವಹಾರಗಳಲ್ಲಿ ಸಿಕ್ಕಿಕೊಂಡು ವಜಾ ಆಗುವ ಎಂಜಿನಿಯರುಗಳ ಪುನರ್‌ ನೇಮಕಕ್ಕೆ ತಾವಾಗಲೀ ತಮ್ಮ ಸಚಿವ
ಬಳಗದವರಾಗಲೀ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು.

ADVERTISEMENT

ಗೋಲಗುಂಬಜ್‌ ರೈಲು ದರೋಡೆ
ಹುಬ್ಬಳ್ಳಿ, ಜೂನ್‌ 29–
ಗದಗಿನ ಗದಗ ಗೇಟ್‌ ಕ್ರಾಸ್‌ ಬಳಿ ಬುಧವಾರ ರಾತ್ರಿ ಗದಗ– ಸೊಲ್ಲಾಪುರ ಗೋಲ್‌ಗುಂಬಜ್‌ ಎಕ್ಸ್‌ಪ್ರೆಸ್‌ ರೈಲು ಗಾಡಿಯಲ್ಲಿ ಶಸ್ತ್ರಧಾರಿ ದರೋಡೆಕೋರರು ಒಬ್ಬ ಪ್ರಯಾಣಿಕನಿಂದ ನಗದು ಹಾಗೂ ಇತರ ಹಲವರ ಚಿನ್ನಾಭರಣ ದೋಚಿದ್ದಾರೆ. ಬುಧವಾರ ರಾತ್ರಿ 11.30ರ ವೇಳೆಗೆ ಈ ದರೋಡೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.