ADVERTISEMENT

25 ವರ್ಷಗಳ ಹಿಂದೆ | ಶನಿವಾರ, 8–7–1995

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 19:30 IST
Last Updated 7 ಜುಲೈ 2020, 19:30 IST

2,800 ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಕ್ರಮ

ಬೆಂಗಳೂರು, ಜುಲೈ 7– ಪ‍್ರೌಢಶಾಲೆಗಳಲ್ಲಿ ಖಾಲಿಯಿರುವ 2,000 ಶಿಕ್ಷಕರ ಹುದ್ದೆ ಹಾಗೂ ಕಿರಿಯ ಕಾಲೇಜುಗಳ 800 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜನ್‌ ಪಿಳ್ಳೆ ಹಠಾತ್‌ ಸಾವು

ADVERTISEMENT

ನವದೆಹಲಿ, ಜುಲೈ 7 (ಪಿಟಿಐ)– ಕುಖ್ಯಾತ ಉದ್ಯಮಿ ರಾಜನ್‌ ಪಿಳ್ಳೆ (47) ಇಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಯಕೃತ್ತಿನ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹೃದಯ ಚಿಕಿತ್ಸಾ ಸಂಸ್ಥೆಗೆ ಕಳಿಸಿಕೊಡುವಂತೆ ಪಿಳ್ಳೆ ಮಾಡಿದ್ದ ಮನವಿಯನ್ನು ವಿಶೇಷ ಕೋರ್ಟ್‌ ಬುಧವಾರ ತಿರಸ್ಕರಿಸಿತ್ತು.

22 ವರ್ಷಗಳ ಹಿಂದೆ ಕೇರಳದಿಂದ ಸಿಂಗಪುರಕ್ಕೆ ತೆರಳಿದ ಪಿಳ್ಳೆ ‘ಬ್ರಿಟಾನಿಯ ಫುಡ್ಸ್‌’ ಕಂಪನಿ ಸ್ಥಾಪಿಸಿ ‘ಬಿಸ್ಕತ್‌ ಕಿಂಗ್‌’ ಎಂದು ಖ್ಯಾತಿ ಪಡೆದರು. ಇವರ ಹಲವುಕಂಪನಿಗಳು ಅಮೆರಿಕದ ಖ್ಯಾತ ಕಂಪನಿಗಳೊಂದಿಗೆ ವಿಲೀನಗೊಂಡಿವೆ. 3.15 ಕೋಟಿ ಸಿಂಗಪುರ ಡಾಲರ್‌ ವಂಚನೆ ಹಾಗೂ ಇತರ 23 ಮೋಸದ ಪ್ರಕರಣಗಳನ್ನು ಇವರ ಮೇಲೆ ಹೊರಿಸಿದ್ದ ಸಿಂಗಪುರ ಕೋರ್ಟ್‌, 14 ವರ್ಷಗಳ ಜೈಲುಶಿಕ್ಷೆ ಹಾಗೂ 20 ಸಾವಿರ ಡಾಲರ್‌ ದಂಡವಿಧಿಸುವ ಸಾಧ್ಯತೆಯಿತ್ತು. ಆದರೆ ಅಷ್ಟರಲ್ಲೇಅವರು ಸಿಂಗಪುರದಿಂದ ಭಾರತಕ್ಕೆ ತಲೆ
ಮರೆಸಿಕೊಂಡು ಬಂದರು. ಭಾನುವಾರ ದೆಹಲಿಯ ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಅವರನ್ನು ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.