ADVERTISEMENT

25 ವರ್ಷಗಳ ಹಿಂದೆ: ಮಾರ್ಚ್‌ 18, 1998

ಪ್ರಜಾವಾಣಿ ವಿಶೇಷ
Published 17 ಮಾರ್ಚ್ 2023, 21:15 IST
Last Updated 17 ಮಾರ್ಚ್ 2023, 21:15 IST
   

ಗೋಲಿಬಾರ್‌– ಕರ್ಫ್ಯೂ: ಕಂಡಲ್ಲಿ ಗುಂಡಿಗೆ ಆಜ್ಞೆ
ಹುಬ್ಬಳ್ಳಿ, ಮಾರ್ಚ್‌ 17–
ಕಮರಿಪೇಟೆ ಸಮೀಪದ ಡಾಕಪ್ಪನ ಸರ್ಕಲ್‌ನಲ್ಲಿ ಹೋಳಿ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಕೃತ್ಯಗಳ ಹಿನ್ನೆಲೆಯಲ್ಲಿ ಇಂದು ಸಾಯಂಕಾಲ 6 ಗಂಟೆಯಿಂದ ಮಾರ್ಚ್‌ 19ರವರೆಗೆ ಶಹರದಾದ್ಯಂತ 48 ಗಂಟೆಗಳ ಅವಧಿಗೆ ಕರ್ಫ್ಯೂ ವಿಧಿಸಲಾಗಿದೆ. ಹಿಂಸಾಕೃತ್ಯದಲ್ಲಿ ತೊಡಗುವವರ ಮೇಲೆ ಕಂಡಲ್ಲಿ ಗುಂಡು ಹಾರಿಸಲೂ ಆದೇಶಿಸಲಾಗಿದೆ.

ಹಿಂಸಾಚಾರದ ನಿಯಂತ್ರಣಕ್ಕಾಗಿ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ 3 ಮಂದಿ ಗಾಯಗೊಂಡಿದ್ದಾರೆ. ಅಶ್ರುವಾಯು ಶೆಲ್‌ ಹೊಟ್ಟೆಗೆ ಬಡಿದ ಪರಿಣಾಮ ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಕಿಮ್ಸ್‌ ಐಸಿಯುನಲ್ಲಿ ದಾಖಲಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 200 ಮಂದಿಯನ್ನು ಬಂಧಿಸಲಾಗಿದೆ.

ಪ್ರೊ. ಜಿವೆಂ, ಸಿಂಪಿ, ಕುಞಿಗೆ ಸಾಹಿತ್ಯ ಪ್ರಶಸ್ತಿ
ಬೆಂಗಳೂರು ಮಾರ್ಚ್‌ 17–
ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಾಗಿ ಭಾಷಾ ವಿದ್ವಾಂಸ ಜಿ. ವೆಂಕಟಸುಬ್ಬಯ್ಯ, ವೀರೇಂದ್ರ ಸಿಂಪಿ, ವಿಜಯ ಸಾಸನೂರ, ಡಾ. ವಿಜಯಾ ಹಾಗೂ ಬೊಳುವಾರು ಮಹಮದ್‌ ಕುಞಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 1997ರ ಗೌರವ ಪ್ರಶಸ್ತಿ ಲಭಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.