ADVERTISEMENT

25 ವರ್ಷಗಳ ಹಿಂದೆ: ಸೋಮವಾರ, ಫೆ. 19, 1996

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 21:31 IST
Last Updated 18 ಫೆಬ್ರುವರಿ 2021, 21:31 IST
   

ಸಚಿವ ಮಿರಾಜುದ್ದೀನ್‌ ರಾಜೀನಾಮೆ ಅಂಗೀಕಾರ
ಬೆಂಗಳೂರು, ಫೆ. 18–
ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ಪುರಸಭೆ ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚಿಕೆ ವಿವಾದಕ್ಕೆ ಸಿಲುಕಿರುವ ಬಂದೀಖಾನೆ ರಾಜ್ಯ ಸಚಿವ ಮಿರಾಜುದ್ದೀನ್‌ ಪಟೇಲ್‌ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಖುರ್ಷಿದ್‌ ಆಲಂ ಖಾನ್‌ ಅವರು ಇಂದು ಸಂಜೆ ಅಂಗೀಕರಿಸಿದರು.

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ವಿತರಿಸಲೆಂದು ಮಿರಾಜುದ್ದೀನ್‌ ಅವರು ಮದ್ಯವನ್ನು ಆಪ್ತ ಸಹಾಯಕರೊಬ್ಬರ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಇದು ಸಚಿವರ ತಿಳಿವಳಿಕೆಯಲ್ಲೇ ನಡೆದಿತ್ತು ಎಂಬ ಆರೋಪ ಬಂದುದರಿಂದ ಅವರು ರಾಜೀನಾಮೆ ನೀಡಿದ್ದಾರೆ.

ಚಿತ್ರ ವಿತರಕರ ಸಮಸ್ಯೆ ಪರಿಹಾರಕ್ಕೆ ಸಮಿತಿ: ಭರವಸೆ
ಬೆಂಗಳೂರು, ಫೆ. 18–
ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಇನ್ನಷ್ಟು ಸೂಕ್ತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ತೀರ್ಮಾನದಿಂದ ಪ್ರದರ್ಶಕ ಮತ್ತು ವಿತರಕ ವಲಯಕ್ಕೆ ಯಾವುದೇ ರೀತಿಯ ತೊಂದರೆ ಎದುರಾದಲ್ಲಿ ಅದಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ವಾರ್ತಾ ಇಲಾಖೆಯ ಕಾರ್ಯದರ್ಶಿ ಎನ್‌.ವಿಶ್ವನಾಥನ್‌ ಭರವಸೆ ಕೊಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.