ಏರದ ಧಾರಣೆ; ಸಂಕಷ್ಟದಲ್ಲಿ ಅಡಿಕೆ ಬೆಳೆಗಾರ
ಮಂಗಳೂರು, ಸೆಪ್ಟೆಂಬರ್ 8– ಬೆಳೆಗಾರರ ತೀವ್ರ ಒತ್ತಾಸೆಯ ಮೇರೆಗೆ ಅಡಿಕೆ ಮೇಲಿನ ಆಮದು ಸುಂಕದ ಪ್ರಮಾಣವನ್ನು ಶೇ 35ರಿಂದ ಶೇ 100ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಎರಡು ತಿಂಗಳಾದರೂ, ಅಡಿಕೆ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರದಿರುವುದು ಸಣ್ಣ, ಮಧ್ಯಮ ಪ್ರಮಾಣದ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕೇಂದ್ರ ಸರ್ಕಾರ 715 ವಸ್ತುಗಳ ಮುಕ್ತ ಆಮದಿಗೆ ಪ್ರಸಕ್ತ ಸಾಲಿನಲ್ಲಿ ನಿರ್ಧಾರ ಕೈಗೊಂಡ ದಿನದಿಂದ ಅಡಿಕೆ ಧಾರಣೆ ಕುಸಿದು ಬೆಳೆಗಾರರು ಕಂಗಾಲಾಗಿದ್ದಾಗ ಬೆಳೆಗಾರರ ಹಿತರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದಿರುವ ಕ್ಯಾಂಪ್ಕೊ, ದೆಹಲಿಯಲ್ಲಿ ನಡೆಸಿದ ತೀವ್ರ ಯತ್ನದ ಪರಿಣಾಮವಾಗಿ ಅಡಿಕೆ ಮೇಲಿನ ಆಮದು ಸುಂಕವನ್ನು ಶೇ 100ಕ್ಕೆ ಏರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.