ನೇರ ವಿದೇಶಿ ಹೂಡಿಕೆಗೆ ತಂಡ: ಪ್ರಧಾನಿ ಪ್ರಕಟಣೆ
ನ್ಯೂಯಾರ್ಕ್, ಸೆ. 13 (ಯುಎನ್‌ಐ)– ವಿದೇಶಿ ನೇರ ಹೂಡಿಕೆಯ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಎದುರಾಗುವ ಅಡ್ಡಿ ನಿವಾರಣೆಗೆ ತಮ್ಮ ಕಾರ್ಯಾಲಯದಲ್ಲಿ ‘ಕಾರ್ಯತಂತ್ರ ನಿರ್ವಹಣಾ ತಂಡ’ ರಚಿಸಲಾಗುವುದು ಎಂದು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಪ್ರಕಟಿಸಿದರು.
ಅಮೆರಿಕದ ಉದ್ದಿಮೆದಾರರಿಗೆ ನೀಡಿದ ಉತ್ತೇಜನಕಾರಿ ಸಂದೇಶದಲ್ಲಿ, ಮುಂದಿನ ಹೂಡಿಕೆಯ ಮೂರು ವರ್ಷಗಳಲ್ಲಿ ಅಮೆರಿಕದ ಬಂಡವಾಳ ಹರಿವಿನ ಗುರಿಯನ್ನು 15 ಶತಕೋಟಿ ಡಾಲರ್‌ಗಳಿಗೆ ನಿಗದಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.