ADVERTISEMENT

25 ವರ್ಷಗಳ ಹಿಂದೆ: ಈ ವರ್ಷ 40 ಶನಿವಾರ ದಿನಪೂರ್ತಿ ಶಾಲೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:25 IST
Last Updated 21 ನವೆಂಬರ್ 2025, 0:25 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಈ ವರ್ಷ 40 ಶನಿವಾರ ದಿನಪೂರ್ತಿ ಶಾಲೆ

ಬೆಂಗಳೂರು, ನ. 20– ಜನಗಣತಿ ಮತ್ತು ಚುನಾವಣಾ ಕಾರ್ಯದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಿದ ಹಿನ್ನೆಲೆ ಯಲ್ಲಿ ಈ ವರ್ಷ 40 ಶನಿವಾರಗಳಲ್ಲಿ ಪೂರ್ಣ ದಿನ ಶಾಲೆ ನಡೆಸಲಾಗುತ್ತದೆ ಎಂದು ಸಾರಿಗೆ ಸಚಿವ ಸಿ.ಆರ್‌. ಸಗೀರ್‌ ಅಹ್ಮದ್‌ ವಿಧಾನಸಭೆಯಲ್ಲಿ ತಿಳಿಸಿದರು.

ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರಿಗೆ ಶಿಕ್ಷಣ ಸಚಿವರ ಪರವಾಗಿ ಉತ್ತರ ನೀಡುತ್ತಾ, ಈ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಜನಗಣತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದರು.

ADVERTISEMENT

ಸೆನೆಟ್‌ ರದ್ದು, ಕುಲಪತಿ ಅಧಿಕಾರ ಮೊಟಕು

ಬೆಂಗಳೂರು, ನ. 20– ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸೆನೆಟ್‌ ಅನ್ನು ರದ್ದುಪಡಿಸುವುದು ಮತ್ತು ಕುಲಪತಿಗಳ ನೇಮಕಕ್ಕೆ ಸಮಿತಿ ರಚಿಸುವ ರಾಜ್ಯಪಾಲರ ಅಧಿಕಾರ ಕಿತ್ತುಕೊಳ್ಳುವುದು ಮುಂತಾದ ಪ್ರಮುಖ ಬದಲಾವಣೆಗಳಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆಯನ್ನು ಸಚಿವ ಸಂಪುಟ ಅನುಮೋದಿಸಿದ್ದು, ಇದೇ ಅಧಿವೇಶನ ದಲ್ಲಿ ಅದು ಮಂಡನೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.