
ಪ್ರಜಾವಾಣಿ ವಾರ್ತೆ
ಬೆಂಗಳೂರು, ಜ. 29– ಗುಜರಾತ್ ಭೂಕಂಪ ಜನರ ಮನದಲ್ಲಿ ಇನ್ನೂ ಭಯವನ್ನು ಉಳಿಸಿರುವಂತೆಯೇ ಇಂದು ಬೆಳಗ್ಗೆ 8.08 ಗಂಟೆಗೆ ಬೆಂಗಳೂರು, ಕನಕಪುರ, ಮೈಸೂರು, ತುಮಕೂರು ಜಿಲ್ಲೆ ಮತ್ತು ರಾಜ್ಯದ ಇತರ ಕೆಲವು ದಕ್ಷಿಣ ಭಾಗಗಳಲ್ಲಿ ಲಘು ಭೂಕಂಪನ ಸಂಭವಿಸಿ ಜನರು ಭಯಭೀತರಾಗುವಂತೆ ಮಾಡಿತು.
ಈ ಭೂಕಂಪನದಿಂದ ಪ್ರಾಣ ಅಥವಾ ಹೆಚ್ಚಿನ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ರಿಕ್ಟರ್ ಮಾಪಕದಲ್ಲಿ ಈ ಕಂಪನ 4.3ರಷ್ಟು ದಾಖಲಾಗಿದ್ದು, ಸುಮಾರು ಎರಡರಿಂದ ಮೂರು ಸೆಕೆಂಡುಗಳವರೆಗೆ ಭೂಮಿ ಕಂಪಿಸಿತು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಡಾ. ಎ.ಎಲ್. ಕೊಪ್ಪರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.