ನಕಲಿ ಛಾಪಾ ಕಾಗದ ಜಾಲ ಪತ್ತೆ: 10 ಮಂದಿ ಬಂಧನ
ಬೆಂಗಳೂರು, ಆಗಸ್ಟ್ 20– ನಕಲಿ ಛಾಪಾ ಕಾಗದ ಮತ್ತು ಸರ್ಕಾರಿ ಮುದ್ರಾಂಕಗಳ ಅಕ್ರಮ ಮಾರಾಟದ ಬೃಹತ್ ಜಾಲವನ್ನು ಪತ್ತೆ ಹಚ್ಚಿರುವ ಉಪ್ಪಾರಪೇಟೆ ಪೊಲೀಸರು, ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 10 ಕೋಟಿ ರೂಪಾಯಿ ಬೆಲೆಬಾಳುವ ನಕಲಿ ಛಾಪಾ ಕಾಗದ ಮತ್ತು ಮುದ್ರಾಂಕಗಳು ಹಾಗೂ 34.5 ಲಕ್ಷ ರೂಪಾಯಿ ನಗದು, 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.