ಬೆಂಗಳೂರು, ಜೂನ್ 29– ನಗರಕ್ಕೆ ಸಮೀಪದ ವೈಟ್‌ಫೀಲ್ಡ್‌ನಲ್ಲಿ ಸುಮಾರು ರೂ. 650 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಪಾರ್ಕ್ (ಐ.ಟಿ. ಪಾರ್ಕ್) ನಿರ್ಮಾಣದಲ್ಲಿ ಪಾಲ್ಗೊಳ್ಳಲು ಸಿಂಗಪುರದ ಜುರಾಂಗ್ ಟೌನ್ ಕಾರ್ಪೊರೇಷನ್ ಮುಂದೆ ಬಂದಿದ್ದು, ಮುಂದಿನ ತಿಂಗಳು ರಾಜ್ಯ ಸರ್ಕಾರದ ಜೊತೆ ಅದು ಒಪ್ಪಂದಕ್ಕೆ ಸಹಿ ಹಾಕಲಿದೆ.
ಮೂರು ದಿನಗಳ ಸಿಂಗಪುರದ ಭೇಟಿ ನಂತರ ನಗರಕ್ಕೆ ಇಂದು ಆಗಮಿಸಿದ ಮುಖ್ಯಮಂತ್ರಿ
ಎಸ್.ಎಂ. ಕೃಷ್ಣ ಅವರು, ಈ ವಿಷಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.