ADVERTISEMENT

25 ವರ್ಷಗಳ ಹಿಂದೆ: ಜಯಾ ಪ್ರಕರಣಗಳ ವರ್ಗ ನ್ಯಾಯಾಧೀಶರ ತಿರಸ್ಕಾರ

ಪ್ರಜಾವಾಣಿ ವಿಶೇಷ
Published 9 ಫೆಬ್ರುವರಿ 2024, 1:18 IST
Last Updated 9 ಫೆಬ್ರುವರಿ 2024, 1:18 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಜಯಾ ಪ್ರಕರಣಗಳ ವರ್ಗ ನ್ಯಾಯಾಧೀಶರ ತಿರಸ್ಕಾರ

ಚೆನ್ನೈ, ಫೆ. 8– ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣ
ಗಳನ್ನು ಬೇರೆ ನ್ಯಾಯಾಲಯಗಳಿಗೆ ವರ್ಗಾಯಿಸಿ ಹೊರಡಿಸಿರುವ ಆದೇಶವನ್ನು ಇಬ್ಬರು ವಿಶೇಷ ನ್ಯಾಯಾಧೀಶರು
ತಿರಸ್ಕರಿಸುವುದರೊಂದಿಗೆ ಕೇಂದ್ರ ಸರ್ಕಾರದ ವಿವಾದಿತ ನಿರ್ಧಾರವು ನಾಟಕೀಯ ತಿರುವು ಪಡೆದುಕೊಂಡಿದೆ.

ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ತಮಿಳುನಾಡು ಸರ್ಕಾರ ನೇಮಿಸಿದ್ದ ಮೂವರು ವಿಶೇಷ ನ್ಯಾಯಾಧೀಶರಲ್ಲಿ ಇಬ್ಬರು ‘ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾನೂನಿನ ಬೆಂಬಲವಿಲ್ಲ’ ಎಂದು ಘೋಷಿಸಿ, ವಿಚಾರಣಾ ಪ್ರಕ್ರಿಯೆ ಮುಂದುವರಿಸುವುದಾಗಿ ಹೇಳಿದ್ದಾರೆ.

ADVERTISEMENT

ಬಸವೇಶ್ವರರಿಗೆ ಅಪಮಾನ: ಸಿಒಡಿ ತನಿಖೆಗೆ 

ಹುಬ್ಬಳ್ಳಿ, ಫೆ. 8– ಶಹರದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಅಪಮಾನ ಮಾಡಲಾಯಿತೆಂದು ಆಪಾದಿಸಲಾಗಿರುವ ಘಟನೆಯ ತನಿಖೆಯನ್ನು ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಸಿಒಡಿ ತನಿಖೆಗೆ ಒಪ್ಪಿಸಿದ್ದಾರೆ ಎಂಬುದಾಗಿ ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಸಿಒಡಿ ತಂಡ ನಾಳೆ ಹುಬ್ಬಳ್ಳಿ ಶಹರಕ್ಕೆ ಬಂದು ಸ್ಥಳೀಯ ಪೊಲೀಸರಿಂದ ತನಿಖಾ ಕಾರ್ಯವನ್ನು ವಹಿಸಿಕೊಳ್ಳಲಿದೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಈಗಾಗಲೇ ಕೆಲವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.