
ಪ್ರಜಾವಾಣಿ ವಾರ್ತೆ
ಮ್ಯಾಂಚೆಸ್ಟರ್, ಜೂನ್ 8– ಜಿದ್ದಾಜಿದ್ದಿನ ಮತ್ತೊಂದು ಹೋರಾಟದಲ್ಲಿ ಕೊನೆಗೂ ಭಾರತ, ಪಾಕಿಸ್ತಾನ ಭಯದ ಭೂತದಿಂದ ಬಿಡುಗಡೆ ಪಡೆಯಿತು. ವಿಶ್ವಕಪ್ ಕ್ರಿಕೆಟ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ಕ್ರಿಕೆಟ್ ಪಂಡಿತರ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಭಾರತ, ಪಾಕಿಸ್ತಾನವನ್ನು 47 ರನ್‌ಗಳಿಂದ ಸೋಲಿಸಿತು.
ಸಚಿನ್ ತೆಂಡೂಲ್ಕರ್(45), ರಾಹುಲ್ ದ್ರಾವಿಡ್(61) ಮತ್ತು ಮಹ್ಮದ್ ಅಜರುದ್ದೀನ್(59) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 227 ರನ್ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.