
ಪ್ರಜಾವಾಣಿ ವಾರ್ತೆ
ನವದೆಹಲಿ,ಡಿ13 (ಯುಎನ್‌ಐ)– ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿ ಅಥವಾ ಪರಿಣಾಮಗಳನ್ನು ಎದುರಿಸಿ ಎಂದು ಕೇಂದ್ರ ಸಂಪರ್ಕ ಖಾತೆಯ ಮಂತ್ರಿ ರಾಮ ವಿಲಾಸ್ ಪಾಸ್ವಾನ್ ಅವರು ಇಂದು ಕಳೆದ ಒಂಬತ್ತು ದಿನಗಳಿಂದ ಕೆಲಸ ನಿಲ್ಲಿಸಿ ಚಳವಳಿಯಲ್ಲಿ ನಿರತರಾಗಿರುವ ಆರು ಲಕ್ಷ ಮಂದಿ ಅಂಚೆ ಇಲಾಖೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಕ್ರಮ ಕೈಗೊಳ್ಳಲು ಸಮಯ ಸನ್ನಿಹಿತವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅಂಚೆ ಕೆಲಸ ಸಹಜ ಸ್ಥಿತಿಗೆ ಮರಳುವುದು ಎಂದ ಪಾಸ್ವಾನ್, ಮುಷ್ಕರ ನಿಲ್ಲಿಸಲು ‘ಎಸ್ಮಾ’ ಕಾಯ್ದೆ ಜಾರಿ ಮಾಡಲಾಗುವುದೆ ಎಂಬುದನ್ನು ಸ್ಪಷ್ಟ ಪಡಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.