25 ವರ್ಷಗಳ ಹಿಂದೆ..
ಪರಿಶಿಷ್ಟರಿಗೆ ಮೀಸಲಾತಿ ಇನ್ನೂ ಹತ್ತು ವರ್ಷ
ನವದೆಹಲಿ, ಅ. 25– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒದಗಿಸಲಾಗಿರುವ ಮೀಸಲಾತಿ ವ್ಯವಸ್ಥೆಯನ್ನು ಮತ್ತೆ ಹತ್ತು ವರ್ಷಗಳವರೆಗೆ ವಿಸ್ತರಿಸಲು ಅವಶ್ಯ ಕಾಯ್ದೆಯೊಂದನ್ನು ಕೇಂದ್ರ ಸರ್ಕಾರ ತರಲಿದೆ.
ಅದೇ ರೀತಿ ಈಗ ಕೆಲವು ರಾಜ್ಯಗಳಲ್ಲಿರುವ ಶೇ 50ಕ್ಕೂ ಹೆಚ್ಚಿನ ಮೀಸಲಾತಿ ವ್ಯವಸ್ಥೆಯನ್ನು ಸಕ್ರಮಗೊಳಿಸಲು ಅವಶ್ಯ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ.
ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ಸೆಂಟ್ರಲ್ ಹಾಲ್‌ನಲ್ಲಿ ಹದಿಮೂರನೇ ಲೋಕಸಭೆಯ ಅಸ್ತಿತ್ವದ ನಂತರ ಆರಂಭಗೊಂಡ ಸಂಸತ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ನೂತನ ಸರ್ಕಾರದ ಗೊತ್ತುಗುರಿಗಳ ಬಗೆಗೆ ಬೆಳಕು ಚೆಲ್ಲಿದರು.
ಲವಲವಿಕೆ ವಾತಾವರಣದಲ್ಲಿ ಶಾಸಕರ ಪ್ರಮಾಣವಚನ
ಬೆಂಗಳೂರು, ಅ. 25– ಹನ್ನೊಂದನೇ ವಿಧಾನಸಭೆ ಕಲಾಪ ಇಂದು ಪ್ರಾರಂಭವಾದಾಗ ಹೊಸ ಶಾಸಕರಲ್ಲಿ ಮತ್ತು ಸಚಿವರಲ್ಲಿ ಎಲ್ಲಿಲ್ಲದ ಉತ್ಸಾಹ, ಲವಲವಿಕೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಎದುರು 207 ಮಂದಿ ಶಾಸಕರಾಗಿ ಪ್ರಮಾಣವಚನ
ಸ್ವೀಕರಿಸಿದರು.
ವಿಧಾನಸಭಾಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲದ ಕಾರಣ, ಹಿರಿಯ ಶಾಸಕ ಅಜೀಜ್ ಸೇಟ್ ಅವರು ಹಂಗಾಮಿಯಾಗಿ ಆ ಸ್ಥಾನವನ್ನು ಅಲಂಕರಿಸಿ ಕಲಾಪ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.