ಮಕ್ಕಳ ಪ್ರಜ್ಞೆ ತಪ್ಪಿಸಿದ ಮೆಹಂದಿ
ನಮಕ್ಕಲ್, ಜುಲೈ 13 (ಯುಎನ್‌ಐ)– ಕುಮಾರಪಾಳ್ಯಂ ಎಂಬಲ್ಲಿ ಶಾಲೆಯ ಮಕ್ಕಳ ಕೈ ಮೇಲೆ ಮೆಹಂದಿಯಲ್ಲಿ ಚಿತ್ತಾರ ಬಿಡಿಸಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಅವನು ಚಿತ್ರ ಬಿಡಿಸಿದ ನಂತರ ಅದನ್ನು ಮೂಸಿ ನೋಡಲು ಮಕ್ಕಳಿಗೆ ಹೇಳಿದಾಗ, ಅವರಲ್ಲಿ 30 ಮಂದಿ ಪ್ರಜ್ಞೆ ತಪ್ಪಿದರು. ಆಗ ಇತರರು ಕಿರುಚಿಕೊಂಡಾಗ ಅವನು ಅಲ್ಲಿಂದ ಪರಾರಿಯಾದ.
ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರ ನರ್ತನ
ಬೆಂಗಳೂರು, ಜುಲೈ 13– ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಇಂದೂ ಮುಂದುವರಿದಿದ್ದು, ನದಿಗಳು ತುಂಬಿ ಪ್ರವಾಹ ಉಂಟಾಗಿದೆ. ಕೊಡಗು ಜಿಲ್ಲೆಯ ಹಲವೆಡೆ ಕಾವೇರಿ ಅಪಾಯದ ಮಟ್ಟವನ್ನು ಮೀರಿದ್ದು, ಹತ್ತಾರು ಗ್ರಾಮಗಳು ಜಲಾವೃತವಾಗಿವೆ.
ಕಡೂರು– ಮಂಗಳೂರು ಹೆದ್ದಾರಿಯ ಚಾರ್ಮಾಡಿ ಘಟ್ಟದಲ್ಲಿ ಇಂದು ಬೆಳಗ್ಗಿನ ಜಾವ ಭಾರೀ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಗಂಜಿ ಕೇಂದ್ರ: ಕೊಡಗಿನ ಕರಡಿಗೋಡು ಬಳಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಎಂಟು ಮನೆಗಳನ್ನು ತೆರವು ಮಾಡಿಸಿ 35 ಮಂದಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.