
ಸೋಲೊಪ್ಪಿದ ಗೋರ್
ಬೆಂಗಳೂರು, ಡಿ. 14– ಅಮೆರಿಕದ ಅಧ್ಯಕ್ಷ ಆಲ್ ಗೋರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಂದು ಔಪಚಾರಿಕ ವಾಗಿ ಸೋಲೊಪ್ಪಿಕೊಂಡರು. ಟೆಕ್ಸಾಸ್‌ನ ಗವರ್ನರ್ ಜಾರ್ಜ್ ಡಬ್ಲ್ಯು ಬುಷ್ ಅವರೇ ಮುಂದಿನ ಅಧ್ಯಕ್ಷರು ಎಂದು ಬಣ್ಣಿಸಿದ ಅವರು, ಬುಷ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
‘ಸಚಿವರ ರಾಜೀನಾಮೆ ಇಲ್ಲ’
ನವದೆಹಲಿ, ಡಿ. 14– ಎನ್‌ಡಿಎ ಕಾರ್ಯಸೂಚಿಯನ್ನು ತಮ್ಮ ಸರ್ಕಾರ ಅನುಸರಿಸುತ್ತಿದ್ದು, ಅಯೋಧ್ಯೆ ವಿಷಯದಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು ಪ್ರಧಾನಿ ವಾಜಪೇಯಿ ಸ್ಪಷ್ಟಪಡಿಸಿದ ನಂತರ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮಂಡಿಸಿದ ನಿಂದನಾ ಗೊತ್ತುವಳಿಯನ್ನು ಸರ್ಕಾರ ಇಂದು ತಿರಸ್ಕರಿಸಿತು. ಚರ್ಚೆಗೆ ಉತ್ತರ ನೀಡಿದ ಪ್ರಧಾನಿ, ನ್ಯಾಯಾಲಯದ ತೀರ್ಪು ಇಲ್ಲವೇ ಹಿಂದೂ ಮತ್ತು ಮುಸ್ಲಿಮ್‌ರ ನಡುವೆ ಒಪ್ಪಂದದಿಂದ ಮಾತ್ರ ಅಯೋಧ್ಯಾ ವಿವಾದ ಇತ್ಯರ್ಥ ಸಾಧ್ಯ, ಬೇರೆ ಪರಿಹಾರವೇ ಇಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.