ADVERTISEMENT

25 ವರ್ಷಗಳ ಹಿಂದೆ: ನಾಸ್ಡಾಕ್‌ ಕಚೇರಿ ಬೆಂಗಳೂರಿನಲ್ಲಿ ಆರಂಭ

25 ವರ್ಷಗಳ ಹಿಂದೆ; ಸೋಮವಾರ, 12–2–2001

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:30 IST
Last Updated 11 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಫೆ. 11– ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಅಮೆರಿಕದ ನಾಸ್ಡಾಕ್‌ ಷೇರುಪೇಟೆಯ ಭಾರತೀಯ ಕಚೇರಿ ನಾಳೆ ಇಲ್ಲಿ ಆರಂಭವಾಗಲಿದೆ.

ಷೇರುಪೇಟೆಯಲ್ಲಿ ವಿಶ್ವದಲ್ಲೇ ಪ್ರಮುಖ ಸ್ಥಾನ ಹೊಂದಿರುವ ನಾಸ್ಡಾಕ್ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ರಾಷ್ಟ್ರದ ಗಮನ ಸೆಳೆದಿದೆ. 

‘ಭಾರತೀಯ ಕಂಪನಿಗಳು ಇನ್ನೂ ಹತ್ತು ವರ್ಷಗಳ ಕಾಲ ಷೇರುಪೇಟೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಾಸ್ಡಾಕ್ ನಿರೀಕ್ಷಿಸುತ್ತಿದೆ’ ಎಂದು ಷೇರು ಮಾರುಕಟ್ಟೆಯ ಉಪಾಧ್ಯಕ್ಷ ಆಲ್‌ಫ್ರೆಡ್‌ ಬರ್ಕ್‌ಲಿ (ಜ್ಯೂನಿಯರ್‌–3) ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಉಗ್ರಗಾಮಿಗಳ ದಾಳಿಗೆ ಬೀರೂರಿನ ಯೋಧ ಬಲಿ

ಚಿಕ್ಕಮಗಳೂರು, ಫೆ. 11– ಮಣಿಪುರದಲ್ಲಿ ಬೋಡೋ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಬೀರೂರು ಬಳಿಯ ಬೋಕಿಕೆರೆಯ ವೀರಯೋಧ ಎಚ್‌. ಸಣ್ಣಗೋವಿಂದಪ್ಪ (36) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಶನಿವಾರ ನಡೆಯಿತು.

ಕಳೆದ ಹದಿನೈದು ವರ್ಷಗಳಿಂದ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಕಳೆದ ಗುರುವಾರ ಮಣಿಪುರದ ಚಂದ್ರಪುರ ಜಿಲ್ಲೆಯಲ್ಲಿ ಯೋಧರನ್ನು ಗಡಿರಕ್ಷಣಾ ಕಾರ್ಯಕ್ಕೆ ಆಯಕಟ್ಟಿನ ಜಾಗಕ್ಕೆ ಬಿಟ್ಟುಬರಲು ಹೋಗಿದ್ದ ಸಂದರ್ಭದಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಗೆ ಸಿಲುಕಿ ಜೀವತೆತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.